ADVERTISEMENT

ವರಿಷ್ಠರ ಮಾತು ಮೀರಿ ಅಪವಿತ್ರ ಮೈತ್ರಿ: ಜೆಡಿಎಸ್ ಟೀಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 16:26 IST
Last Updated 4 ನವೆಂಬರ್ 2020, 16:26 IST

ಹುಬ್ಬಳ್ಳಿ: ಸ್ಥಳೀಯ ಕಾಂಗ್ರೆಸ್‌ ನಾಯಕರು ಪಕ್ಷದ ಹೈಕಮಾಂಡ್‌ ಆದೇಶ ಉಲ್ಲಂಘಿಸಿ ನವಲಗುಂದ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಗಂಗಾಧರಮಠ ಹೇಳಿದರು.

ಪುರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ಜೆಡಿಎಸ್‌ ಸದಸ್ಯರ ಜೊತೆ ಸಭೆ ನಡೆಸಿದ ಅವರು ‘ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕೈ ಜೋಡಿಸುವುದಿಲ್ಲ ಎಂದು ತೆಗೆದುಕೊಂಡಿದ್ದ ತೀರ್ಮಾನವನ್ನು ಜೆಡಿಎಸ್‌ ಸ್ವಾಗತಿಸಿತ್ತು. ಆದರೆ, ಬುಧವಾರದ ಬೆಳವಣಿಗೆಯಲ್ಲಿ ಸ್ಥಳೀಯ ಕಾಂಗ್ರೆಸ್‌ ನಾಯಕರು ಬಿಜೆಪಿ ಜೊತೆ ಬಾಹ್ಯ ಬೆಂಬಲ ಪಡೆದು ಅಧಿಕಾರಕ್ಕೆ ಏರಿದ್ದಾರೆ’ ಎಂದು ಟೀಕಿಸಿದರು.

‘ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆಯೂ ಕಾಂಗ್ರೆಸ್‌ ಮತ್ತು ಬಿಜೆಪಿ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟಿಗೆ ಆಡಳಿತ ನಡೆಸುತ್ತ ಬಂದಿವೆ. ಕಾಂಗ್ರೆಸ್‌ ಅಣ್ಣಿಗೇರಿ ಎಪಿಎಂಸಿ, ಪುರಸಭೆ, ತಾಲ್ಲೂಕು ಪಂಚಾಯ್ತಿ ಹೀಗೆ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ವಿರುದ್ಧವಾಗಿ ಹೊಂದಾಣಿಕೆ ಮಡಿಕೊಂಡಿದೆ. ರಾಜ್ಯದಲ್ಲಿ ಈ ಎರಡೂ ರಾಷ್ಟ್ರೀಯ ಪಕ್ಷಗಳು ಹೋರಾಟ ಮಾಡುತ್ತಿದ್ದರೆ, ಇಲ್ಲಿ ಹೊಂದಾಣಿಕೆ ರಾಜಕೀಯದಲ್ಲಿ ತೊಡಗಿವೆ’ ಎಂದು ದೂರಿದರು.

ADVERTISEMENT

ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ, ಪಕ್ಷದ ಪ್ರಮುಖರಾದ ಶಿವಣ್ಣ ಹುಬ್ಬಳ್ಳಿ, ವೀರನಗೌಡ ಮರಿಗೌಡರ, ಪ್ರದೀಪ ಲೆಂಕನಗೌಡರ, ಡಿ.ಕೆ.ಹಳ್ಳದ, ಆನಂದ ಹವಳಕೋಡ, ಹಟೇಲಸಾಬ ರಾಮದುರ್ಗ, ದ್ಯಾಮಣ್ಣಾ, ಪುರಸಭೆ ಸದಸ್ಯರಾದ ಪ್ರಕಾಶ ಶಿಗ್ಲಿ, ಜೀವನ ಪವಾರ, ಬಾಬಾಜಾನ ಮಕಾನದಾರ, ಅಪ್ಪಣ್ಣಾ ಹಳ್ಳದ, ಮೋದಿನಸಾಬ ಶಿರೂರ, ಸುರೇಶ ಮೇಟಿ, ಮಾಂತೇಶ ಭೋವಿ, ಹನಮಂತ ವಾಲಿಕಾರ, ಹುಸೇನಬಿ ಧಾರವಾಡ, ಚಂದ್ರಲೇಖಾ ಮಳಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.