ADVERTISEMENT

ಕೆಲವೆಡೆ ಮತಯಂತ್ರಗಳಲ್ಲಿ ದೋಷ, ಪಟ್ಟಿಯಲ್ಲಿ ಹೆಸರಿಲ್ಲ: ಗೊಂದಲದ ನಡುವೆ ಮತದಾನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 4:07 IST
Last Updated 23 ಏಪ್ರಿಲ್ 2019, 4:07 IST
   

ಧಾರವಾಡ: ಅಲ್ಲಲ್ಲಿ ಮಾತಯಂತ್ರಗಳಲ್ಲಿ ದೋಷ, ಮತದಾರರ ಪಟ್ಟಿಯಲ್ಲಿ ಇಲ್ಲದ ಹೆಸರಿನಿಂದ ಗೊಂದಲದ ನಡುವೆ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭಗೊಂಡಿತು.

ನಗರದ ಓಂ ಶಾಲೆ ಜಲದರ್ಶಿನಿ ನಗರದ ಮತಗಟ್ಟೆ ಸಂಖ್ಯೆ 58, ನವಲಗುಂದ ತಾಲ್ಲೂಕಿನ ಮೊರಬ, ಧಾರವಾಡ ತಾಲ್ಲೂಕಿನ ಮುರಕಟ್ಟಿ ಗ್ರಾಮದಲ್ಲಿ ಮಾತಯಂತ್ರಗಳ ದೋಷದಿಂದ 30 ನಿಮಿಷ ತಡವಾಗಿ ಮತದಾನ ಆರಂಭಗೊಂಡಿತು.

ಬಿಸಿಲು ಏರುವ ಮೊದಲೇ ಮತದಾನ ಮಾಡಲು ಮತದಾರರು ಸಾಲಿನಲ್ಲಿ ನಿಂತು ಮತದಾನಕ್ಕೆ ಕಾದಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ADVERTISEMENT

ಮಾಳಮಡ್ಡಿಯಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದರಿಂದ ಮತದಾರರು ಆತಂಕಗೊಂಡಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದಾರೆ.

ಉಳಿದಂತೆ ಮತದಾನ ಶಾಂತಿಯುತವಾಗಿ ಆರಂಭಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.