ADVERTISEMENT

ನವಲಗುಂದ | ಮಹಿಳಾ ಸಬಲೀಕರಣವಾದರೆ ದೇಶದ ಅಭಿವೃದ್ಧಿ: ಶ್ರೀನಿವಾಸ ಬಡಿಗೇರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 2:29 IST
Last Updated 6 ಜನವರಿ 2026, 2:29 IST
ನವಲಗುಂದ ತಾಲ್ಲೂಕು ವಿಶ್ವಕರ್ಮ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜಿಲ್ಲಾ ಘಟಕದ ಅಧ್ಯಕ್ಷೆ ಶಾರದಾ ಬಡಿಗೇರ ಉದ್ಘಾಟಿಸಿದರು
ನವಲಗುಂದ ತಾಲ್ಲೂಕು ವಿಶ್ವಕರ್ಮ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜಿಲ್ಲಾ ಘಟಕದ ಅಧ್ಯಕ್ಷೆ ಶಾರದಾ ಬಡಿಗೇರ ಉದ್ಘಾಟಿಸಿದರು   

ನವಲಗುಂದ: ಮಹಿಳಾ ಸಬಲೀಕರಣವಾದರೆ ದೇಶದ ಅಭಿವೃದ್ಧಿಗೆ ಸಹಕಾರ. ಮಹಿಳೆಯರು ಸ್ವಯಂ ಉದ್ಯೋಗಕ್ಕೆ ಒತ್ತು ಕೊಡಬೇಕಾಗಿದೆ ಎಂದು ಶಂಕರ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀನಿವಾಸ ಬಡಿಗೇರ ಹೇಳಿದರು.

ಪಟ್ಟಣದ ನಾಗಲಿಂಗಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ವಿಶ್ವಕರ್ಮ ಮಹಿಳಾ ಘಟಕದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರದ ಹಲವಾರು ಕಲ್ಯಾಣ ಕಾರ್ಯಕ್ರಮಗಳಿದ್ದು ಸಮಾಜ ಭಾಂದವರು ಅದರ ಸದುಪಯೋಗ ಪಡೆದು ಮುಖ್ಯವಾಹಿನಿಗೆ ದಾಪುಗಾಲು ಹಾಕಬೇಕಾಗಿದೆ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ನಾಗಲಿಂಗ ಸ್ವಾಮಿಮಠದ ವಿರೇಂದ್ರ ಸ್ವಾಮೀಜಿ ಮಾತನಾಡಿ, ಆಧುನಿಕ ಅವಿಷ್ಕಾರಗಳಿಂದ ಕುಲ ಕಸಬುಗಳಿಗೆ ಸಂಚಕಾರ ಇದ್ದರೂ ಅದರಲ್ಲಿ ಕುಟುಂಬ ಯಜಮಾನರಿಗೆ ಸಹಕಾರ ನೀಡುವ ಸ್ವಯಂ ಉದ್ಯೋಗ ಮಾಡಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಶಾರದಾ ಬಡಿಗೇರ ಉದ್ಘಾಟಿಸಿದರು. ಗೀತಾ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಕಾಳಪ್ಪ ಬಡಿಗೇರ, ತಾಲ್ಲೂಕು ಅಧ್ಯಕ್ಷ ಗಂಗಪ್ಪ ಕಮ್ಮಾರ, ನಗರ ಘಟಕದ ಅಧ್ಯಕ್ಷ ನಿಂಗಪ್ಪ ಬಡಿಗೇರ, ತಾಲ್ಲೂಕು ಮಹಿಳಾ ಅಧ್ಯಕ್ಷೆ ಶಾಂತಾ ಹವಳಕೋಡ ಇದ್ದರು.

ಲಲಿತಾ ನರಗುಂದ ಸ್ವಾಗತಿಸಿದರ. ಜಯಶ್ರೀ ಬಡಿಗೇರ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರಾವಣಿಯಿಂದ ಪ್ರಾರ್ಥಿಸಿದರು. ವಂದನಾ ನಾಗಲಿಂಗಸ್ವಾಮಿಮಠ ನಿರೂಪಿಸಿದರು. ಶೋಭಾ ಹವಳಕೋಡ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.