ADVERTISEMENT

ಮುಳಗುಂದ: ರಸ್ತೆ ಮಧ್ಯೆ ಅಪಾಯದ ಗುಂಡಿ

​ಪ್ರಜಾವಾಣಿ ವಾರ್ತೆ
Published 28 ಮೇ 2025, 14:46 IST
Last Updated 28 ಮೇ 2025, 14:46 IST
ಮುಳಗುಂದ–ಗದಗ ರಸ್ತೆಯ ಘನತ್ಯಾಜ್ಯ ವಿಲೇವಾರಿ ಘಟಕದ ಹತ್ತಿರ ರಸ್ತೆ ಮಧ್ಯ ಗುಂಡಿ ಉಂಟಾಗಿರುವುದು
ಮುಳಗುಂದ–ಗದಗ ರಸ್ತೆಯ ಘನತ್ಯಾಜ್ಯ ವಿಲೇವಾರಿ ಘಟಕದ ಹತ್ತಿರ ರಸ್ತೆ ಮಧ್ಯ ಗುಂಡಿ ಉಂಟಾಗಿರುವುದು   

ಮುಳಗುಂದ: ಗದಗ-ಮುಳಗುಂದ ನಡುವಿನ ಮುಖ್ಯ ರಸ್ತೆಯ, ಘನತ್ಯಾಜ್ಯ ವಿಲೇವಾರಿ ಘಟಕದ ಹತ್ತಿರ ರಸ್ತೆ ಮಧ್ಯ ಗುಂಡಿಗಳು ಉಂಟಾಗಿದ್ದು, ಬೈಕ್‌ ಸವಾರರಿಗೆ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ.

ಹಲವು ದಿನಗಳಿಂದ ರಸ್ತೆ ಹಾಳಾಗಿದ್ದು, ಐದಾರು ಜಾಗಗಳಲ್ಲಿ ವಾಹನಗಳಿಗೆ ಅಪಾಯ ತಂದೊಡ್ಡುವ ಗುಂಡಿಗಳು ಉಂಟಾಗಿವೆ. ಇದರಿಂದ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯವಾದ ಘಟನೆಗಳು ನಡೆಯುತ್ತಿವೆ. ಕಾರು ಇನ್ನಿತರ ವಾಹನಗಳ ಸಂಚಾರಕ್ಕೂ ಸಮಸ್ಯೆ ಆಗುತ್ತಿದೆ. ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನ ಹರಿಸಿ ಗುಂಡಿ ಮುಚ್ಚಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.