ADVERTISEMENT

₹50 ಸಾವಿರ ಲಂಚ ಸ್ವೀಕಾರ: ಗ್ರಾಮ ಪಂಚಾಯ್ತಿ ಸದಸ್ಯ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 13:18 IST
Last Updated 20 ಮಾರ್ಚ್ 2020, 13:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗದಗ: ಸಿವಿಎಲ್‌ ಗುತ್ತಿಗೆದಾರರೊಬ್ಬರಿಗೆ ಕಾಮಗಾರಿಯೊಂದರ ಬಿಲ್‌ ಮಂಜೂರು ಮಾಡಿಸಲು, ಎನ್‌ಒಸಿ ನೀಡಲು ₹2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹರ್ತಿ ಗ್ರಾಮ ಪಂಚಾಯ್ತಿ ಸದಸ್ಯ ಪ್ರಕಾಶ ವೀರಭಧ್ರಪ್ಪ ಲದ್ದಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಪ್ರಕಾಶ ಲದ್ದಿ ಅವರು, ಶುಕ್ರವಾರ ಗದುಗಿನ ಮೌರ್ಯ ಹೊಟೇಲ್‌ನಲ್ಲಿ ₹50 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ನಗದು ಸಹಿತ ವಶಕ್ಕೆ ಪಡೆದಿದ್ದಾರೆ.

ಪ್ರಕಾಶ ವಿರುದ್ಧ ಸಿವಿಲ್ ಗುತ್ತಿಗೆದಾರ ಮಹಮದ್‌ಅಸೀಫ್ ಇಮಾಮ್‍ಹುಸೇನ್ ಬೊದ್ಲೇಖಾನ ಅವರು ಎಸಿಬಿಗೆ ದೂರು ನೀಡಿದ್ದರು. ಇವರು ಗದಗ ತಾಲ್ಲೂಕು ಹರ್ತಿ ಗ್ರಾಮದ ಬಸವೇಶ್ವರ ಗುಡಿ ಹತ್ತಿರ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಕೆಐಆರ್‌ಡಿಎಲ್‌ ಪರವಾಗಿ ಪೂರ್ಣಗೊಳಿಸಿದ್ದರು. ಈ ಕಾಮಗಾರಿಯನ್ನು ಹರ್ತಿ ಗ್ರಾಮ ಪಂಚಾಯ್ತಿಗೆ ಹಸ್ತಾಂತರಿಸಿ, ಬಿಲ್ ಮಂಜೂರು ಮಾಡಲು ಎನ್‍ಓಸಿ ಕೊಡಿಸುವ ಸಲುವಾಗಿ ಪ್ರಕಾಶ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ADVERTISEMENT

ದಾಳಿಯಲ್ಲಿ ಎಸಿಬಿ ಡಿವೈಎಸ್‌ಪಿ ವಾಸುದೇವ ರಾಮ ಎನ್, ಇನ್‌ಸ್ಪೆಕ್ಟರ್‌ ಎ.ಎಸ್.ಗುದಿಗೊಪ್ಪ, ವಿಶ್ವನಾಥ ಎಚ್, ಸಿಬ್ಬಂದಿ ಬಿ.ಬಿ.ಜಕ್ಕಣ್ಣವರ. ಎಂ.ಎಂ.ಅಯ್ಯನಗೌಡರ, ಆರ್.ಎಚ್.ಹೆಬಸೂರ, ಎಸ್.ಟಿ.ಅಣ್ಣಿಗೇರಿ, ಎಂ.ಎನ್.ಕರಿಗಾರ, ಐ.ಸಿ.ಜಾಲಿಹಾಳ. ವಿ.ಎ.ಜೋಳದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.