ADVERTISEMENT

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 14:25 IST
Last Updated 24 ಜೂನ್ 2025, 14:25 IST
ಲಕ್ಷ್ಮೇಶ್ವರದ ಕೃಷಿಕ ಸಮಾಜದ ವತಿಯಿಂದ ಸರ್ಕಾರ ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ರೈತರು ತಹಶೀಲ್ದಾರ್‌ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು
ಲಕ್ಷ್ಮೇಶ್ವರದ ಕೃಷಿಕ ಸಮಾಜದ ವತಿಯಿಂದ ಸರ್ಕಾರ ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ರೈತರು ತಹಶೀಲ್ದಾರ್‌ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು   

ಲಕ್ಷ್ಮೇಶ್ವರ: ‘ಸತತ ಮಳೆಯಿಂದಾಗಿ ಹೆಸರು ಮತ್ತು ಉದ್ದಿನ ಬೆಳೆಗಳು ಕೊಳೆಯುವ ಸ್ಥಿತಿಯಲ್ಲಿವೆ. ಸಧ್ಯ ತಂಪು ವಾತಾವರಣ ಇರುವುದರಿಂದ ಮುಂದೆಯೂ ಬೆಳೆಗಳು ಸುಧಾರಿಸುವ ಲಕ್ಷಣಗಳಿಲ್ಲ. ಹೆಸರು ಬೆಳೆಗಾರರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಮಂಗಳವಾರ ಕೃಷಿಕ ಸಮಾಜದ ತಾಲ್ಲೂಕು ಘಟಕದ ವತಿಯಿಂದ ರೈತರು ತಹಶೀಲ್ದಾರ್‌ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಮಾತನಾಡಿ, ‘ತಾಲ್ಲೂಕಿನಮಾಡಳ್ಳಿ, ಗೊಜನೂರು, ಯಳವತ್ತಿ, ಅಡರಕಟ್ಟಿ, ಬಟ್ಟೂರು, ಪುಟಗಾಂವ್‍ಬಡ್ನಿ, ಹುಲ್ಲೂರು ಗೋವನಾಳ, ರಾಮಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಸರು ಬೆಳೆಯನ್ನು ವ್ಯಾಪಕವಾಗಿ ರೈತರು ಬೆಳೆಯುತ್ತಾರೆ. ನಿರಂತರ ಸುರಿಯತ್ತಿರುವ ಮಳೆ ಹೆಸರು ಬೆಳೆಗೆ ಹಾನಿ ಆಗುತ್ತಿದೆ. ಕಾರಣ ಸರ್ಕಾರ ರೈತರಿಗೆ ತಕ್ಷಣ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಸುರೇಶ ಸಿಂದಗಿ, ಫಕ್ಕೀರಪ್ಪ ಹೂಗಾರ, ಗಿರಿಯಪ್ಪಗೌಡ ಪಾಟೀಲ, ವೆಂಕಟೇಶ ಪಾಟೀಲ, ಮಲ್ಲನಗೌಡ ಪಾಟೀಲ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.