ADVERTISEMENT

ಚಿತ್ರಕಲಾ ವಿವಿ ಸ್ಥಾಪನೆ ಇಂದಿನ ಅಗತ್ಯ

ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 4:19 IST
Last Updated 9 ಸೆಪ್ಟೆಂಬರ್ 2022, 4:19 IST
ಗದಗ ನಗರದ ವಿಜಯ ಕಲಾ ಮಂದಿರದಲ್ಲಿ ಆಯೋಜಿಸಿರುವ ಕಲಾವಿದ ಇಂದ್ರಕುಮಾರ ದಸ್ತೇನವರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ ವೀಕ್ಷಿಸಿದರು.
ಗದಗ ನಗರದ ವಿಜಯ ಕಲಾ ಮಂದಿರದಲ್ಲಿ ಆಯೋಜಿಸಿರುವ ಕಲಾವಿದ ಇಂದ್ರಕುಮಾರ ದಸ್ತೇನವರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ ವೀಕ್ಷಿಸಿದರು.   

ಗದಗ: ಜಾನಪದ ವಿಶ್ವವಿದ್ಯಾಲಯ, ಸಂಸ್ಕೃತ ವಿಶ್ವವಿದ್ಯಾಲಯದ ಮಾದರಿಯಲ್ಲೇ ಚಿತ್ರಕಲಾ ವಿಶ್ವವಿದ್ಯಾಲಯ ಸ್ಥಾಪನೆ ಇಂದಿನ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ ಹೇಳಿದರು.

ನಗರದ ವಿಜಯ ಕಲಾ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೆರವಿನೊಂದಿಗೆ ಕಲಾವಿದ ಇಂದ್ರಕುಮಾರ ದಸ್ತೇನವರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಆಧುನಿಕ ಜಗತ್ತಿನಲ್ಲಿ ಚಿತ್ರಕಲೆ ಉಳಿವು ಮತ್ತು ಬೆಳವಣಿಗೆಗೆ ವಿಶ್ವವಿದ್ಯಾಲಯ ಅಗತ್ಯವಾಗಿದೆ’ ಎಂದು ತಿಳಿಸಿದರು.

ADVERTISEMENT

‘ಕಲಾವಿದನ ದೃಷ್ಟಿಕೋನ, ಒಳನೋಟ, ಮನೋಭಿವ್ಯಕ್ತಿಯ ಮಾಧ್ಯಮವಾಗಿ ಚಿತ್ರಕಲೆಗುರುತಿಸಿಕೊಂಡಿದೆ. ಜತೆಗೆ ಕಲೆಯನ್ನು ಆಸ್ವಾದಿಸುವ ವ್ಯಕ್ತಿಯ ವ್ಯಕ್ತಿತ್ವವನ್ನೂ ಸಹ ಅರ್ಥೈಸುತ್ತದೆ. ಚಿತ್ರಕಲೆಗೆ ಜಾತಿ, ಧರ್ಮ- ಭಾಷೆ ಮತ್ತು ಸಂಸ್ಕೃತಿಯ ಹಂಗಿಲ್ಲ. ಅಕ್ಷರಸ್ಥ, ಅನಕ್ಷರಸ್ಥರಲ್ಲೂ ಭಾವನೆಗಳಿಗೆ ಬಣ್ಣತುಂಬಿ ಕಲೆ ಸೃಷ್ಟಿಸುವ ಪರಿಣಾಮಕಾರಿ ಮಾಧ್ಯಮವಾಗಿದೆ’ ಎಂದು ತಿಳಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ರಮೇಶ ಚವ್ಹಾಣ, ಹಿರಿಯ ಕಲಾವಿದ ಕೆ.ಕೆ.ಮಕಾಳಿ, ವಿಜಯ ಕಲಾ ಮಂದಿರದ ಕಾರ್ಯದರ್ಶಿ ಪ್ರಕಾಶ ಅಕ್ಕಿ, ಜೆ.ಎನ್.ಕಲಾ ಕಾಲೇಜಿನ ಪ್ರಾಚಾರ್ಯ ಬಿ.ಎಲ್. ಚವ್ಹಾಣ, ಕಲಾವಿದ ಇಂದ್ರಕುಮಾರ ದಸ್ತೇನವರ್ ಉಪಸ್ಥಿತರಿದ್ದರು.

ವಿಜಯ ಕಲಾ ಮಂದಿರದ ಪ್ರಾಚಾರ್ಯ ಕೃಷ್ಣ ಕೆ.ಎಂ. ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಕೆ.ಕೆ.ಮಕಾಳಿ ಅವರಿಂದ ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.