ADVERTISEMENT

ದೀಪಾವಳಿ ನೆನಪಿಸುವಂತೆ ಬೆಳಗಿದ ದೀಪಗಳು

ಪ್ರಧಾನಿ ಕರೆಗೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ; ಪಟಾಕಿ ಸಿಡಿಸಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 16:55 IST
Last Updated 5 ಏಪ್ರಿಲ್ 2020, 16:55 IST
ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ ಅವರ ನಿವಾಸದಲ್ಲಿ ದೀಪ ಬೆಳಗಲಾಯಿತು
ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ ಅವರ ನಿವಾಸದಲ್ಲಿ ದೀಪ ಬೆಳಗಲಾಯಿತು   

ಗದಗ: ಪ್ರಧಾನಿ ನರೇಂದ್ರ ಮೋದಿ ಅವರ ‘ದೀಪ ಬೆಳಗುವ’ ಕರೆಗೆ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಗದಗ–ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನರು ರಾತ್ರಿ 9 ಗಂಟೆಗೆ 9 ನಿಮಿಷ ಮನೆಗಳಲ್ಲಿ ದೀಪ ಬೆಳಗಿದರು. ಕೆಲವರು ಮನೆಯಿಂದ ಹೊರಬಂದು, ಬಾಗಿಲ ಬಳಿ, ಬಾಲ್ಕನಿಯಲ್ಲಿ, ಕಿಟಕಿಯ ಪಕ್ಕದಲ್ಲಿ, ಮನೆಯ ತಾರಸಿಯ ಮೇಲೆ ಹಣತೆಗಳನ್ನು, ಮೊಂಬತ್ತಿಗಳನ್ನು ಹಚ್ಚಿಟ್ಟರು. ಕೆಲವರು ಮೊಬೈಲ್‌ನಲ್ಲಿ ಪ್ಲಾಶ್‌ಲೈಟ್‌ ಬೆಳಗಿದರು.

ಕೆಲವರು ಸಂಜೆಯೇ ಮನೆಯ ಆವರಣ ಸ್ವಚ್ಛಗೊಳಿಸಿ, ಮನೆಯ ಮುಂದೆ ಭಾರತದ ಭೂಪಟವನ್ನು ರಂಗೋಲಿಯಲ್ಲಿ ಬಿಡಿಸಿದ್ದರು. ನಿಗದಿತ ಸಮಯದಲ್ಲಿ ಅದರ ನಡುವೆ ಹಣತೆ ಬೆಳಗಿದರು. ಏಕಕಾಲದಲ್ಲಿ ಇಡೀ ನಗರದ ತುಂಬ ಬೆಳಗಿದ ದೀಪಗಳು ದೀಪಾವಳಿ ಹಬ್ಬದ ವರ್ಣ ವೈಭವನ್ನು ನೆನಪಿಸುವಂತಿತ್ತು.

ADVERTISEMENT

ದೀಪ ಬೆಳಗಿದ ನಂತರ, ಮನೆಗಳಿಂದ ಹೊರಬಂದ ಕೆಲವರು ಪಟಾಕಿ ಸಿಡಿಸಿದರು. ಇನ್ನು ಕೆಲವರು, ‘ಗೋ ಕೊರೊನಾ ಗೋ ಎಂದು ಜಯಘೋಷ ಮೊಳಗಿಸಿದರು. ದೀಪ ಬೆಳಗುವ ಉತ್ಸಾಹದಲ್ಲಿ ಅನೇಕರು ಸಾಮಾಜಿಕ ಅಂತರ ಪಾಲಿಸುವುದನ್ನು ಮರೆತ್ತಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.