ADVERTISEMENT

ನರಗುಂದ | ಬೆಳೆ ಹಾನಿ: ಎಸ್‌ಡಿಆರ್‌ಎಫ್‌ ತಂಡ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 5:05 IST
Last Updated 5 ಸೆಪ್ಟೆಂಬರ್ 2025, 5:05 IST
ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದ ಜಮೀನುಗಳಿಗೆ ಬೆಂಗಳೂರಿನ ತಹಶೀಲ್ದಾರ್ ಪ್ರಶಾಂತ್. ಎನ್.ಎಸ್. ನೇತೃತ್ವದ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ತಂಡ) ಭೇಟಿ ನೀಡಿ ಮೆಕ್ಕೆಜೋಳ ಬೆಳೆ ಪರಿಶೀಲಿಸಿತು
ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದ ಜಮೀನುಗಳಿಗೆ ಬೆಂಗಳೂರಿನ ತಹಶೀಲ್ದಾರ್ ಪ್ರಶಾಂತ್. ಎನ್.ಎಸ್. ನೇತೃತ್ವದ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ತಂಡ) ಭೇಟಿ ನೀಡಿ ಮೆಕ್ಕೆಜೋಳ ಬೆಳೆ ಪರಿಶೀಲಿಸಿತು   

ನರಗುಂದ: ಅತಿವೃಷ್ಟಿಯಿಂದ ತಾಲ್ಲೂಕಿನಲ್ಲಿ ವಿವಿಧ ಬೆಳೆಗಳು ಹಾನಿಯಾಗಿದ್ದನ್ನು ವೀಕ್ಷಿಸಲು ಬೆಂಗಳೂರಿನ ತಹಶೀಲ್ದಾರ್ ಪ್ರಶಾಂತ್ ಎನ್.ಎಸ್. ನೇತೃತ್ವದ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ತಂಡ) ಭೇಟಿ ಮಾಡಿ ಪರಿಶೀಲಿಸಿತು. ಕಲಕೇರಿ, ಕುರ್ಲಗೇರಿ, ಸೋಮಪುರ, ಕೊಣ್ಣೂರ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಹೆಸರು ಕಾಳು, ಗೋವಿನಜೋಳ, ಈರುಳ್ಳಿ, ತರಕಾರಿ, ಪೇರಲ ಬೆಳೆಗಳನ್ನು ವೀಕ್ಷಿಸಿದರು. ಆಯಾ ಗ್ರಾಮಗಳಲ್ಲಿ ರೈತರಿಂದ ಮಾಹಿತಿ ಪಡೆದು ಸರ್ಕಾರಕ್ಕೆ ಹಾನಿಯಾದ ಬೆಳೆಗಳ ಬಗ್ಗೆ ಸಂಪೂರ್ಣ ವರದಿ ನೀಡುವುದಾಗಿ ಪ್ರಶಾಂತ್ ಹೇಳಿದರು.

ಪರಿಹಾರಕ್ಕೆ ಆಗ್ರಹ: ಅತಿವೃಷ್ಟಿಗೆ ತಾಲ್ಲೂಕಿನ ರೈತರು ತತ್ತರಿಸಿ ಹೋಗಿದ್ದಾರೆ. ಆದ್ದರಿಂದ ಎಕರೆಗೆ ₹25 ಸಾವಿರದಂತೆ ಎಲ್ಲ ರೈತರಿಗೆ ಪರಿಹಾರ ನೀಡಬೇಕು. ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.

ADVERTISEMENT

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ಮಾತನಾಡಿ, ಈಗಾಗಲೇ ಹಾನಿಯಾದ ಎಲ್ಲ ಬೆಳೆಗಳನ್ನು ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಮಾಡಿ ಸಂಪೂರ್ಣ ವರದಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ, ಎಸಿ ಭೇಟಿ ನೀಡಿದ್ದಾರೆ. ಈಗ ಬೆಂಗಳೂರಿನಿಂದ ತಂಡ ಭೇಟಿ ಬೆಳೆ ಹಾನಿ ಪರಿಶೀಲಿಸಿದೆ ಎಂದರು.

ತೋಟಾರಿಕಾ ಇಲಾಖೆ ಅಧಿಕಾರಿ ಪ್ರಶಾಂತ್ ದೇವರಮನಿ, ಕಂದಾಯ ನಿರೀಕ್ಷಕ ಎಸ್‌.ಎಲ್‌.ಪಾಟೀಲ್, ನಾಗರಾಜ್ ಕನೋಜ್, ಗ್ರಾಮ ಆಡಳಿತ ಅಧಿಕಾರಿ ಶ್ರತಿ ಭಜಂತ್ರಿ, ಎಚ್‌.ಆರ್.ಯತ್ನಟ್ಟಿ, ಸಂಜು ಹೂಗಾರ್, ಟಿ.ಆರ್‌.ಪಾಟೀಲ್ ಹಾಗೂ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.