ADVERTISEMENT

ರೋಣ: ಕಳೆದುಕೊಂಡಿದ್ದ ಚಿನ್ನ, ಬ್ಯಾಗ್ ಮಹಿಳೆಗೆ ಮರಳಿಸಿದ ಚಾಲಕ, ನಿರ್ವಾಹಕ

​ಪ್ರಜಾವಾಣಿ ವಾರ್ತೆ
Published 24 ಮೇ 2025, 12:56 IST
Last Updated 24 ಮೇ 2025, 12:56 IST
ರೋಣ: ಪಟ್ಟಣದ ನಿವಾಸಿ ಚೈತ್ರಾ ರಾಘವೇಂದ್ರ ಶೆಟ್ಟರ ಅವರು ಕಳೆದುಕೊಂಡಿದ್ದ ಬ್ಯಾಗ್ ಹಾಗೂ ಚಿನ್ನದ ತಾಳಿಯನ್ನು ಮಹಿಳೆಗೆ ಹಿಂದಿರುಗಿಸಿ ಮಾನವೀಯತೆ ಮೆರೆದ ಚಾಲಕ ಹಾಗೂ ನಿರ್ವಾಹಕ
ರೋಣ: ಪಟ್ಟಣದ ನಿವಾಸಿ ಚೈತ್ರಾ ರಾಘವೇಂದ್ರ ಶೆಟ್ಟರ ಅವರು ಕಳೆದುಕೊಂಡಿದ್ದ ಬ್ಯಾಗ್ ಹಾಗೂ ಚಿನ್ನದ ತಾಳಿಯನ್ನು ಮಹಿಳೆಗೆ ಹಿಂದಿರುಗಿಸಿ ಮಾನವೀಯತೆ ಮೆರೆದ ಚಾಲಕ ಹಾಗೂ ನಿರ್ವಾಹಕ   

ರೋಣ: ಪಟ್ಟಣದ ನಿವಾಸಿ ಚೈತ್ರಾ ರಾಘವೇಂದ್ರ ಶೆಟ್ಟರ ಎಂಬುವವರು 4 ತೊಲೆ ಬಂಗಾರದ ತಾಳಿ ಸರವಿದ್ದ ಬ್ಯಾಗ್ ಅನ್ನು ಬಸ್‌ನಲ್ಲಿ ಮರೆತು ಹೋಗಿದ್ದು, ಅದನ್ನು ಅವರಿಗೆ ಮರಳಿಸುವ ಮೂಲಕ ವಾ.ಕ.ರಾ.ರ.ಸಾರಿಗೆ ಬಸ್‌ನ ರೋಣ ಘಟಕದ ಬಸ್ ಚಾಲಕ ಕೆ.ಜಿ.ದಾಸರ ಹಾಗೂ ನಿರ್ವಾಹಕ ಬಸವರಾಜ ಮುಗಳಿ ಪ್ರಾಮಾಣಿಕತೆ ಮೆರೆದಿದ್ದಾರೆ.

ರೋಣದಿಂದ ನರೇಗಲ್‌ಗೆ ತೆರಳಿದ ಮಹಿಳೆ ಮುಂದಿನ ಊರಿಗೆ ಪ್ರಯಾಣ ಬೆಳೆಸುವ ಭರದಲ್ಲಿ ಬಸ್‌ನಲ್ಲಿಯೇ ಬ್ಯಾಗ್ ಮರೆತು ಹೋಗಿದ್ದಾರೆ. ನಿರ್ವಾಹಕ ಹಾಗೂ ಚಾಲಕ ಬ್ಯಾಗ್ ಪರಿಶೀಲಿಸಿ, ಕೂಡಲೇ ಅದರಲ್ಲಿದ್ದ ಆಧಾರ್ ಕಾರ್ಡ್ ನೋಡಿ ಅವರನ್ನು ಸಂಪರ್ಕಿಸಿ ಬಂಗಾರ ಹಾಗೂ ಬ್ಯಾಗ್ ಮರಳಿಸಿದ್ದಾರೆ.

ಪೊಲೀಸ್ ಇಲಾಖೆ ಮೆಚ್ಚುಗೆ: ರೋಣ ಪೊಲೀಸ್ ಠಾಣೆಗೆ ಮಹಿಳೆಯನ್ನು ಕರೆಸಿ ಬ್ಯಾಗ್ ನೀಡಲಾಯಿತು. ರೋಣ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಕಾಶ ಬಣಕಾರ ಚಾಲಕ ಹಾಗೂ ನಿರ್ವಾಹಕರ ಕಾರ್ಯವನ್ನು ಶ್ಲಾಘಿಸಿ, ಸನ್ಮಾನಿಸಿದರು.

ADVERTISEMENT

ಕೆ.ಎಸ್.ಆರ್.ಟಿ.ಸಿ ಚಾಲಕರಾದ ಸಿದ್ದಪ್ಪ ಗದಗಿನ, ಪ್ರಮೋದ ಸಂಕಣ್ಣವರ, ಮುತ್ತಣ್ಣ ಪಟ್ಟಣಶೆಟ್ಟಿ, ಮುತ್ತಣ್ಣ ಕಟಗೇರಿ, ಸಿ.ವಿ.ಭಟ್ಟೂರ, ಶಂಕರ ವಡವಡಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.