ADVERTISEMENT

ರೋಣ| ಅಪಘಾತ: ಸವಾರನ ಸಾವು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 15:36 IST
Last Updated 5 ಆಗಸ್ಟ್ 2023, 15:36 IST

ರೋಣ: ತಾಲ್ಲೂಕಿನ ಸಂದಿಗವಾಡ ಮಲ್ಲಾಪುರ ರಸ್ತೆ ಮಧ್ಯೆ ಬೈಕಿಗೆ ಟಾಟಾ ಎಸಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.

ಮೃತ ವ್ಯಕ್ತಿ ಬೆಳವಣಕಿ ಗ್ರಾಮದ ನಿವಾಸಿ ಬಸವರಾಜ ಚನ್ನಬಸಪ್ಪ ಕುಸುಗಲ್ (39) ಎಂದು ಗುರುತಿಸಲಾಗಿದೆ.

ಸಂದಿಗವಾಡ ಹಾಗೂ ಮಲ್ಲಾಪುರ ರಸ್ತೆ ಮಧ್ಯವಿರುವ ಶ್ರೀಸಾಯಿ ದಾಬಾದ ಹತ್ತಿರ ಬೆಳವಣಕಿಯಿಂದ ರೋಣಕ್ಕೆ ಬರುತ್ತಿರುವ ಬೈಕ್ ಹಾಗೂ ರೋಣದ ಕಡೆಯಿಂದ ಬೆಳವಣಕಿಯ ಕಡೆಗೆ ಹೋಗುತ್ತಿರುವ ಟಾಟಾ ಎಸಿ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮೃತ ದೇಹವನ್ನು ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ADVERTISEMENT

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ ಎಂದು ಪಿಎಸ್‌ಐ ಎಲ್.ಕೆ.ಜೂಲಕಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.