ADVERTISEMENT

ಜನಪದ ಉಳಿವಿನಿಂದ ಕನ್ನಡ ಸಂಸ್ಕೃತಿ ಹಿರಿಮೆ ಹೆಚ್ಚುತ್ತದೆ: ಫಕ್ಕಿರೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 4:45 IST
Last Updated 21 ಡಿಸೆಂಬರ್ 2025, 4:45 IST
ನರಗುಂದ ತಾಲ್ಲೂಕಿನ ಹದಲಿ ಗ್ರಾಮದಲ್ಲಿ ಎಳ್ಳು ಅಮಾವಾಸ್ಯೆ ಅಂಗವಾಗಿ ಅಲ್ಲಮಪ್ರಭು ಯುವಕ ಮಂಡಳ ವತಿಯಿಂದ ಶುಕ್ರವಾರ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಭಜನಾ ಸ್ಪರ್ಧೆಯನ್ನು ಸೊರಟೂರ ಹಿರೇಮಠದ ಫಕ್ಕಿರೇಶ್ವರ ಸ್ವಾಮೀಜಿ ಉದ್ಘಾಟಿಸಿದರು
ನರಗುಂದ ತಾಲ್ಲೂಕಿನ ಹದಲಿ ಗ್ರಾಮದಲ್ಲಿ ಎಳ್ಳು ಅಮಾವಾಸ್ಯೆ ಅಂಗವಾಗಿ ಅಲ್ಲಮಪ್ರಭು ಯುವಕ ಮಂಡಳ ವತಿಯಿಂದ ಶುಕ್ರವಾರ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಭಜನಾ ಸ್ಪರ್ಧೆಯನ್ನು ಸೊರಟೂರ ಹಿರೇಮಠದ ಫಕ್ಕಿರೇಶ್ವರ ಸ್ವಾಮೀಜಿ ಉದ್ಘಾಟಿಸಿದರು   

ನರಗುಂದ: ‘ಜನಪದ ಸಾಹಿತ್ಯವನ್ನು ಉಳಿಸಿ, ಬೆಳೆಸಿದಾಗ ಕನ್ನಡ ಸಂಸ್ಕೃತಿ ಹಿರಿಮೆ ಹೆಚ್ಚುತ್ತದೆ’  ಎಂದು ಸೊರಟೂರ ಹಿರೇಮಠದ ಫಕ್ಕಿರೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹದಲಿ ಗ್ರಾಮದಲ್ಲಿ ಎಳ್ಳು ಅಮಾವಾಸ್ಯೆ ಅಂಗವಾಗಿ ಅಲ್ಲಮಪ್ರಭು ಯುವಕ ಮಂಡಳ ವತಿಯಿಂದ ಶುಕ್ರವಾರ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಭಜನಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

‘ಜೀವನದ ಅನುಭವ ನೀಡುವ ಜನಪದ ಸಾಹಿತ್ಯ ಆಧುನಿಕ ಜಗತ್ತಿನಲ್ಲಿ ಮರೆಮಾಚುತ್ತಿರುವುದು ವಿಷಾದನೀಯ. ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಏರ್ಪಡಿಸಿದ್ದು ಶ್ಲಾಘನೀಯ’ ಎಂದರು.

ADVERTISEMENT

ಶಿಕ್ಷಕ ಮಂಜುನಾಥ ಯಲಿಗಾರ, ಅಶೋಕ ಕಲಹಾಳ ಮಾತನಾಡಿದರು. ಬಸಪ್ಪ ಬದ್ನಿಕಾಯಿ, ಅಜ್ಜಪ್ಪಗೌಡ ಅಲ್ಲಪ್ಪಗೌಡ್ರ, ಚನ್ನಬಸಪ್ಪ ಬದ್ನಿಕಾಯಿ, ಸುರೇಶಗೌಡ ತಮ್ಮನಗೌಡ್ರ, ನಾಗರಾಜ ಪ್ರಚಂಡಿ, ಶಿವಾಜಿ ಪವಾರ, ಎಸ್.ಎಲ್.ಒಡ್ಡಿನ, ಪ್ರಭುಲಿಂಗಪ್ಪ ಯಲಿಗಾರ, ಯಲ್ಲಪ್ಪ ಹದಗಲ್,
ಬಸವಂತಪ್ಪ ಹಾದಿಮನಿ, ಬಿ.ಜಿ.ಅರಗಂಜಿ, ಜಿ.ಎನ್.ಮಂತ್ರಿ, ಹನಮಂತಪ್ಪ ಕೆರಿ ಇದ್ದರು.

ನಿರ್ಣಾಯಕರಾಗಿ ಕೆ.ಸಿ.ನಗರಜ್ಜಿ, ಗಣೇಶ ಗುಡಗುಡಿ, ಪರಶುರಾಮ ಬಣಕಾರ ಕಾರ್ಯ ನಿರ್ವಹಿಸಿದರು. ಶಂಕ್ರಯ್ಯ ಸಾಲಿಮಠ ಸ್ವಾಗತಿಸಿದರು. ವೀರಯ್ಯ ಹಿರೇಮಠ ನಿರೂಪಿಸಿದರು. ಕೆ.ಎನ್.ಹದಗಲ್ ವಂದಿಸಿದರು.

ಭಜನಾ ಸ್ಪರ್ಧೆ ವಿಜೇತರು
ರಾಜ್ಯಮಟ್ಟದ ಹೊನಲು ಬೆಳಕಿನ ಭಜನಾ ಸ್ಪರ್ಧೆಯ ವಿಜೇತರು ಧಾರವಾಡ ಜಿಲ್ಲೆಯ ಸಿಗನಹಳ್ಳಿಯ ರಾಚಯ್ಯಸ್ವಾಮಿ ಭಜನಾ ತಂಡ ಪ್ರಥಮ ರಾಮದುರ್ಗ ತಾಲ್ಲೂಕಿನ ಗೊನ್ನಾಗರದ ಬಸವೇಶ್ವರ ಭಜನಾ ತಂಡ ದ್ವಿತೀಯ ರೋಣದ ದುರ್ಗಾದೇವಿ ಭಜನಾ ತಂಡ ತೃತೀಯ ಶಲವಡಿಯ ಗುರುಶಾಂತೇಶ್ವರ ಭಜನಾ ತಂಡ ನಾಲ್ಕು ಕೊಣ್ಣೂರಿನ ಬಾಯಮ್ಮದೇವಿ ಭಜನಾ ತಂಡ ಐದನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.