
ಪ್ರಜಾವಾಣಿ ವಾರ್ತೆ
ಉತ್ಖನನದ ವೇಳೆ ಸಿಕ್ಕ ಕಳಸದ ರೀತಿಯ ಕಲ್ಲಿನ ಪ್ರಾಚ್ಯ ಅವಶೇಷ
ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನದ ವೇಳೆ ಮಂಗಳವಾರ ಕಳಸದಂತಿರುವ ಕಲ್ಲಿನ ಪ್ರಾಚ್ಯ ಅವಶೇಷ ಪತ್ತೆಯಾಗಿದೆ.
‘ದೇವಕೋಷ್ಠದ ಶಿಖರದಲ್ಲಿನ ತೃಟಿತ ಸ್ತೂಪ ಅಥವಾ ಕಳಸದ ರೀತಿಯ ಪ್ರಾಚ್ಯ ಅವಶೇಷ ಕುರಿತು ತಜ್ಞರ ಅಧ್ಯಯನದ ಬಳಿಕ ಮಹತ್ವ ಗೊತ್ತಾಗಲಿದೆ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.