ಗದಗ: ನಗರದಲ್ಲಿರುವ ಜೈನ ಸಮಾಜದ ಜನರು ಗುರುವಾರ ಮಹಾವೀರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ನಗರದ ಮುಳಗುಂದ ನಾಕಾ ಬಳಿ ಇರುವ ಭಗವಾನ್ ಮಹಾವೀರ ಸ್ಥೂಪದ ಹತ್ತಿರ ಜೈನಮುನಿಗಳಾದ ರಾಷ್ಟ್ರಸಂತ ಕಮಲಮುನಿ, ಜೈನ ಮುನಿಗಳಾದ ಘನಶ್ಯಾಮ್‍ಮುನಿ, ಕೌಶಲಮುನಿ, ಅಕ್ಷತ್‍ಮುನಿ, ಸಕ್ಸಮ್‍ಮುನಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಮಹಾವೀರರ ಚಿತ್ರವುಳ್ಳ ಅಲಂಕೃತ ವಾಹನದ ಮೆರವಣಿಗೆ ಹಾಗೂ ಪಾಲಕಿಯು ಸಕಲ ವಾದ್ಯ ವೈಭವದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಳಸಾಪುರ ರಸ್ತೆಯ ಪಾಂಜರಪೋಳದ ಗೋಶಾಲಾ ಆವರಣಕ್ಕೆ ಆಗಮಿಸಿ ಧರ್ಮಸಭೆಯಾಗಿ ಮಾರ್ಪಟ್ಟಿತು.
ಮೆರವಣಿಗೆಯಲ್ಲಿ ಶ್ವೇತಾಂಬರ ಮೂರ್ತಿ ಪೂಜಕ ಸಂಘ, ವರ್ಧಮಾನ ಸ್ಥಾನಿಕವಾಸಿ ಸಂಘ, ಜೈನ್ ತೇರಾಪಂಥ ಸಭಾ, ಕಚ್ಚಿದಾಸ್ ಓಸ್ವಾಲ ಜೈನ್ ಸಂಘ, ದಿಗಂಬರ ಜೈನ್ ಸಂಘ, ಗುಜರಾತಿ ಸಮಾಜದ ಹಿರಿಯರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.