ಗಜೇಂದ್ರಗಡ: ಸಮೀಪದ ಕೊಡಗಾನೂರ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಬೆಳೆದಿರುವ ಕಡಲೆ ಗಿಡಗಳನ್ನು ರಾತ್ರೋ ರಾತ್ರಿ ಕಳ್ಳರು ಕಿತ್ತುಕೊಂಡು ಹೋಗುತ್ತಿದ್ದಾರೆ.
‘ರೈತರು ಈಗಾಗಲೇ ಮುಂಗಾರು ಬೆಳೆ ಹಾನಿಯಿಂದ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಸದ್ಯ ಜಮೀನುಗಳಲ್ಲಿ ಬೆಳೆದಿರುವ ಕಡಲೆ ಕಾಯಿ ಕಟ್ಟಿದ್ದು, ಸುಲಿಗಾಯಿ ಇದೆ. ರೈತರು ಜಮೀನಿನಲ್ಲಿ ಇಲ್ಲದಿರುವುದನ್ನು ಗಮನಿಸಿ ಕಳ್ಳರು ಹಸಿ ಕಡಲೆ ಮಾರಾಟ ಮಾಡಲು ಕಿತ್ತುಕೊಂಡು ಹೋಗುತ್ತಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕಳ್ಳರ ಕಾಟ ತಪ್ಪಿಸಿ ರೈತರ ನೆರವಿಗೆ ಬರಬೇಕು’ ಎಂದು ಕೊಡಗಾನೂರ ರೈತರಾದ ರೇಣುಕಯ್ಯ ಅಂಗಡಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.