ಲಕ್ಷ್ಮೇಶ್ವರ: ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಶಾಂತಿ ಸಭೆ ಜರುಗಿತು.
ನಿವೃತ್ತ ಶಿಕ್ಷಕ ಪೂರ್ಣಾಜಿ ಖರಾಟೆ ಮಾತನಾಡಿ, ‘ಈಚಿನ ದಿನಗಳಲ್ಲಿ ಹಬ್ಬ ಆಚರಿಸುವ ಸಂದರ್ಭದಲ್ಲಿ ಡಿಜೆ ಹಚ್ಚುವ ಪದ್ಧತಿ ಬೆಳೆದು ಬರುತ್ತಿದೆ. ಡಿಜೆ ಶಬ್ದಕ್ಕೆ ಸಮಾಜದ ಸ್ವಾಸ್ಥ್ಯವೇ ಹೆದಗೆಡುತ್ತಿದೆ. ವೃದ್ಧರು, ರೋಗಿಗಳು ಮತ್ತು ಚಿಕ್ಕ ಮಕ್ಕಳಿಗೆ ಡಿಜೆ ಸೌಂಡ್ ಮಾರಣಾಂತಿಕವಾಗಿ ಪರಿಣಮಿಸುತ್ತಿದೆ. ಕಾರಣ ಡಿಜೆ ಹಚ್ಚಲು ಪರವಾನಿಗೆ ನೀಡಬಾರದು’ ಎಂದರಲ್ಲದೆ ‘ನಾಡಿನಲ್ಲಿ ಸಾಕಷ್ಟು ಜಾನಪದ ಕಲಾ ತಂಡಗಳು ಇದ್ದು, ಸಂಘ ಸಂಸ್ಥೆಗಳು ಅವರಿಂದ ಕಾರ್ಯಕ್ರಮ ಹಮ್ಮಿಕೊಂಡರೆ ಅವರೂ ಬದುಕುತ್ತಾರೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾತನಾಡಿ, ‘ಗಣೇಶ ಮಹಾಮಂಡಳ ರಚಿಸುವುದರ ಮೂಲಕ ಅದರಡಿಯಲ್ಲಿ ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು. ಆದಷ್ಟು ಒಂದೇ ದಿನ ಮೂರ್ತಿಗಳನ್ನು ವಿಸರ್ಜಿಸಿದರೆ ಜನರು ಮತ್ತು ಪೊಲೀಸರಿಗೂ ಅನುಕೂಲ ಆಗುತ್ತದೆ. ಈ ನಿಟ್ಟಿನಲ್ಲಿ ಯುವ ಜನತೆ ಚಿಂತನೆ ನಡೆಸಬೇಕು. ಮತ್ತು ಸರಿಯಾದ ಸಮಯಕ್ಕೆ ಮೆರವಣಿಗೆಗಳನ್ನು ಶುರು ಮಾಡಿ ರಾತ್ರಿ 10ಕ್ಕೆ ಮುಗಿಸುವುದು ಕಡ್ಡಾಯ ಎಂದರು.
ಹಬ್ಬ ಆಚರಣೆ ನೆಪದಲ್ಲಿ ಸಮಾಜದ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆಯಲ್ಲಿ ಲಕ್ಷ್ಮೇಶ್ವರಕ್ಕೆ ಒಳ್ಳೆಯ ಹೆಸರಿಲ್ಲ. ಹಬ್ಬಗಳ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಕಟ್ಟಿದವರು ನಂತರ ಅವುಗಳನ್ನು ತಾವೇ ತೆರವುಗೊಳಿಸಬೇಕು’ ಎಂದರು.
ಚಂಬಣ್ಣ ಬಾಳಿಕಾಯಿ, ಹೆಚ್ಚುವರಿ ಪೊಲೀಸ್ ವರಿಷ್ಠಾದಿಕಾರಿ ಎಂ.ಬಿ.ಸಂಕದ, ಸಿಪಿಐ ನಾಗರಾಜ ಮಾಡಳ್ಳಿ, ಸೋಮೇಶ ಉಪನಾಳ, ತಹಶೀಲ್ದಾರ್ ವಾಸುದೇವ ಸ್ವಾಮಿ, ಇಒ ಕೃಷ್ಣಪ್ಪ ಧರ್ಮರ, ಮಹೇಶ ಹಡಪದ, ಗಂಗಾಧರ ಮೆಣಸಿನಕಾಯಿ, ದಾದಾಪೀರ ಮುಚ್ಛಾಲೆ, ಮುಕ್ತಿಯಾರ್ ಅಹಮ್ಮದ್ ಗದಗ, ಮುಸ್ತಾಕ್ ಅಹಮ್ಮದ್ ಶಿರಹಟ್ಟಿ, ಫಿರ್ದೋಶ್ ಆಡೂರ, ಸಾಯಿಬ್‍ಜಾನ್ ಹವಾಲ್ದಾರ ಮಾತನಾಡಿದರು.
ಡಿವೈಎಸ್ಪಿ ಜೆ.ಎಚ್.ಇನಾಮದಾರ, ನಾಗರಾಜ ಮಡಿವಾಳರ, ಮಂಜುನಾಥ ಹೊಗೆಸೊಪ್ಪಿನ, ನಾಗೇಶ ಅಮರಾಪುರ, ಸುರೇಶ ನಂದೆಣ್ಣವರ, ಶರಣು ಗೋಡಿ, ಮಹೇಶ ಕಲಘಟಗಿ, ಸದಾನಂದ ನಂದೆಣ್ಣವರ, ಕಲ್ಲೂರ, ವಿಜಯ ಕುಂಬಾರ, ಜಾಕೀರ್ಹುಸೇನ್ ಹವಾಲ್ದಾರ, ಮಂಜುನಾಥ ಹೊಗೆಸೊಪ್ಪಿನ, ಇರ್ಫಾನ್ ಮಿರ್ಜಾ, ನೂರ್ ಅಹಮ್ಮದ್ ಸಿದ್ದಿ ಮತ್ತಿತರರು ಇದ್ದರು.
ಪಿ.ಡಿ.ಮ್ಯಾಗೇರಿ ಪ್ರಾರ್ಥಿಸಿ ಸ್ವಾಗತಿಸಿದರು. ಪಿಎಸ್‍ಐ ಈರಪ್ಪ ರಿತ್ತಿ ವಂದಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.