ADVERTISEMENT

ನರಗುಂದ | ಹನುಮ ಜಯಂತಿ: ಅನ್ನ ಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 15:41 IST
Last Updated 23 ಏಪ್ರಿಲ್ 2024, 15:41 IST
ಹನುಮ ಜಯಂತಿ ಅಂಗವಾಗಿ ನರಗುಂದ ಬಸ್ ಡಿಪೋ ಹತ್ತಿರದ ಹನುಮಾನ ಮಂದಿರದಲ್ಲಿ ಮಹಿಳೆಯರು ಬಾಲ ಹನುಮನ ತೊಟ್ಟಿಲೋತ್ಸವ ನೆರವೇರಿಸಿದರು
ಹನುಮ ಜಯಂತಿ ಅಂಗವಾಗಿ ನರಗುಂದ ಬಸ್ ಡಿಪೋ ಹತ್ತಿರದ ಹನುಮಾನ ಮಂದಿರದಲ್ಲಿ ಮಹಿಳೆಯರು ಬಾಲ ಹನುಮನ ತೊಟ್ಟಿಲೋತ್ಸವ ನೆರವೇರಿಸಿದರು   

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಹನುಮ ಜಯಂತಿಯನ್ನು ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು.

ಐತಿಹಾಸಿಕ ಸೋಮಾಪುರ ಓಣಿಯಲ್ಲಿ ಮಾರುತಿ ಮಂದಿರದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹನುಮ ಜಯಂತಿ ಆಚರಿಸಲಾಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಬಸ್ ಡಿಪೋ ಹತ್ತಿರದ ಹನುಮಾನ ಮಂದಿರದಲ್ಲಿ ಮಹಿಳೆಯರು ಬಾಲ ಹನುಮನ ತೊಟ್ಟಿಲೋತ್ಸವ ನೆರವೇರಿಸಿದರು. ಆರೋಗ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ, ಸಾರಿಗೆ ಸಂಸ್ಥೆ ಸಿಬ್ಬಂದಿ ಸೇವೆ ಸಲ್ಲಿಸಿದ್ದು ವಿಶೇಷವಾಗಿತ್ತು.

ADVERTISEMENT

ಚನಬಸಯ್ಯ ಶಿಂದೋಗಿಮಠ, ಶಾರದಾ ದೊಡಮನಿ, ಅನಸವ್ವ ಶಿಂದೋಗಿಮಠ, ಗಂಗಮ್ಮ ಬಾಟಿ, ಸುಶೀಲಾ ಹಿರೇಗೌಡ್ರ, ಭಾವನಾ ಮೋಟೆ, ಅಶ್ವಿನಿ ಮಂತ್ರಿ, ಜಿಜಾಬಾಯಿ ಬಾಬರ, ಭಾರತಿ ಶಿರಸಂಗಿ, ಈರಮ್ಮ ನರೆಗಲ್ಲ, ರಾಜೇಶ್ವರಿ ಹಿರೇಮಠ, ಕಮಲಾ ಪೇಠೆ, ನೀಲಮ್ಮಾ ಗಾಣಿಗೇರ, ಪ್ರೇಮಾ ಹೂಗಾರ, ಮಂಜು ಪವಾರ, ಮಹಾದೇವಿ ಸಂಗಳಮಠ, ಬಸಮ್ಮ, ಯಶೋಧಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.