ADVERTISEMENT

ಉತ್ತಮ ಆಹಾರ ಕ್ರಮದಿಂದ ಆರೋಗ್ಯ; ಡಾ. ಎಸ್‌.ಎಸ್‌.ನೀಲಗುಂದ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 4:56 IST
Last Updated 15 ಸೆಪ್ಟೆಂಬರ್ 2025, 4:56 IST
ಗದುಗಿನ ಉದಯ ಕೇಶವನಗರದಲ್ಲಿ ಗಣೇಶೋತ್ಸವ ಪ್ರಯುಕ್ತ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಗದುಗಿನ ಉದಯ ಕೇಶವನಗರದಲ್ಲಿ ಗಣೇಶೋತ್ಸವ ಪ್ರಯುಕ್ತ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಗದಗ: ‘ಉತ್ತಮ ಜೀವನಶೈಲಿ, ಆಹಾರಕ್ರಮದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ಡಿಎಚ್‌ಒ ಡಾ. ಎಸ್‌.ಎಸ್‌.ನೀಲಗುಂದ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೇಯಸ್ ರಕ್ತ ತಪಸಣಾ ಕೇಂದ್ರದ ಸಹಯೋಗದಲ್ಲಿ ಉದಯ ಕೇಶವನಗರ ಗಣೇಶೋತ್ಸವ ಪ್ರಯುಕ್ತ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

‘ದೇಹದಲ್ಲಿ ಹೊಸರಕ್ತ ಉತ್ಪತ್ತಿಯಾಗಲು ವೈದ್ಯರ ಸಲಹೆ ಮೇರೆಗೆ ರಕ್ತದಾನ ಮಾಡಬೇಕು. ಇದರಿಂದ ರಕ್ತದೊತ್ತಡ, ಮಧುಮೇಹ ಸೇರಿದಂತೆ ಇತರೆ ಕಾಯಿಲೆಗಳಿಂದ ದೂರವಿರಬಹುದು. ಅಂಗಾಂಗದಾನ ಶ್ರೇಷ್ಠದಾನ. ಇದರಿಂದ ಹಲವಾರು ಜೀವಗಳನ್ನು ಉಳಿಸಬಹುದು’ ಎಂದು ಹೇಳಿದರು.

ADVERTISEMENT

ಮುಖಂಡ ಪ್ರಭು ಬುರಬುರೆ ಮಾತನಾಡಿ, ಇಲ್ಲಿನ ಉದ್ಯಾನ ಅಭಿವೃದ್ಧಿಪಡಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಪ್ರಕಾಶ ಗುಂಡೂರ, ಡಾ.ಅರ್ಪಿತಾ ಬಿರಾದಾರ, ಡಾ.ದೇವೇಂದ್ರ, ಜಿ.ಎಂ.ಯಾನಮಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಬಿ.ಪಿ.ಹುಚ್ಚಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪ್ರಮೋದ ರಾಯಕರ, ದೀಪಕ್‌ ಕಲ್ಲಣ್ಣವರ, ವಿಶಾಲ ಬಾಕಳೆ, ಮಲ್ಲಿಕಾರ್ಜುನ ತೊಂಡಿಹಾಳ, ಬಸವರಾಜ ನುಗ್ಗಿಕಾರಿ, ಮಾಲಿಪಾಟೀಲ, ಅಮೃತರಾವ್, ವಿರಕ್ತಮಠ ಉಪಸ್ಥಿತರಿದ್ದರು.

ರೇಖಾ ದೀಪಕ್‌ ಕಲ್ಲಣ್ಣವರ ಅತಿಥಿಗಳನ್ನು ಪರಿಚಯಿಸಿದರು. ಮನಸ್ವಿ ಹಾಗರಕಿ ಪ್ರಾರ್ಥಿಸಿದರು. ಪ್ರಭುಗೌಡ ಪಾಟೀಲ ಸ್ವಾಗತಿಸಿದರು. ಜಿ.ಎಂ.ಯಾನಮಶೆಟ್ಟಿ ನಿರೂಪಿಸಿದರು. ಸಜ್ಜನರ ವಂದಿಸಿದರು. 

100ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.