ADVERTISEMENT

ರಾಜ್ಯೋತ್ಸವ: ₹50 ಸಾವಿರ ವ್ಯಯಿಸಿ ಚಾಲಕರೊಬ್ಬರಿಂದ ಬಸ್‌ಗೆ ವಿಶೇಷ ಅಲಂಕಾರ

ಹತ್ತು ವರ್ಷಗಳಿಂದ ವಿಶೇಷವಾಗಿ ಬಸ್‌ ಅಲಂಕರಿಸುವ ಚಾಲಕ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 7:08 IST
Last Updated 2 ನವೆಂಬರ್ 2022, 7:08 IST
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ವೀರಣ್ಣ ಮೇಟಿ ಬಸ್‌ನ್ನು ವಿಶೇಷವಾಗಿ ಅಲಂಕರಿಸಿದ್ದರು
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ವೀರಣ್ಣ ಮೇಟಿ ಬಸ್‌ನ್ನು ವಿಶೇಷವಾಗಿ ಅಲಂಕರಿಸಿದ್ದರು   

ಮುಂಡರಗಿ (ಗದಗ ಜಿಲ್ಲೆ): ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಚಾಲಕರೊಬ್ಬರು ₹50 ಸಾವಿರ ವ್ಯಯಿಸಿ ಬಸ್‌ ಅನ್ನು ವಿಶೇಷವಾಗಿ ಅಲಂಕರಿಸಿ, ಸಿಂಹದ ಮೇಲೆ ಕುಳಿತ ಭಂಗಿಯಲ್ಲಿರುವ ಭುವನೇಶ್ವರಿ ಮೂರ್ತಿಯನ್ನು ಮುಂಭಾಗದಲ್ಲಿ ಪ್ರತಿಷ್ಠಾಪಿಸಿ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿದರು.

ಮುಂಡರಗಿ ಡಿಪೊದಲ್ಲಿ ಬಸ್ ಚಾಲಕರಾಗಿರುವ ತಾಲ್ಲೂಕಿನ ಹಿರೇವಡ್ಡಟ್ಟಿ ಗ್ರಾಮದ ವೀರಣ್ಣ ಸಂಗಪ್ಪ ಮೇಟಿ ಹತ್ತು ವರ್ಷಗಳಿಂದ ರಾಜ್ಯೋತ್ಸವದಂದು ಬಸ್‌ ಅನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿಶೇಷವಾಗಿ ಅಲಂಕರಿಸುತ್ತಾರೆ. ಈ ಬಾರಿ ₹50 ಸಾವಿರ ವ್ಯಯಿಸಿ 3.5 ಕ್ವಿಂಟಲ್ ಸೇವಂತಿ, ಗುಲಾಬಿ, ಮಲ್ಲಿಗೆ, ಚೆಂಡು ಹೂವು, ಕನಕಾಂಬರ ಬಳಸಿ ಬಸ್‌ನ ಹೊರಾಂಗಣ ಮತ್ತು ಒಳಾಂಗಣಗಳನ್ನು ಸುಂದರವಾಗಿ ಅಲಂಕರಿಸಿದ್ದರು.

ಬಸ್‌ನ ಎರಡು ಬದಿಗಳಲ್ಲಿ ಜ್ಣಾನಪೀಠ ಪುರಸ್ಕೃತ ಸಾಹಿತಿಗಳು ಹಾಗೂ ಕನ್ನಡ ನಾಡು, ನುಡಿಗಾಗಿ ಶ್ರಮಿಸಿರುವ ಮಹನೀಯರ ಭಾವಚಿತ್ರಗಳನ್ನು ಅಂಟಿಸಲಾಗಿದೆ. ಈ ಮೂಲಕ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕನ್ನಡ ಕಟ್ಟಾಳುಗಳ ಪರಿಚಯ ಮಾಡಿಸಲಾಗುತ್ತಿದೆ.

ADVERTISEMENT

ಹೂಗಳಿಂದ ಅಲಂಕೃತಗೊಂಡಿದ್ದ ಬಸ್‌ ನೋಡಿದ ಜನರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಈ ಬಸ್ ಜಿಲ್ಲೆಯ ಶಿರಹಟ್ಟಿ, ಗದಗ ಭಾಗದಲ್ಲಿ ಸಂಚರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.