
ಪ್ರಜಾವಾಣಿ ವಾರ್ತೆ
ಲಕ್ಕುಂಡಿ: ಮಹಾಶಿವರಾತ್ರಿ ಅಂಗವಾಗಿ ಇಲ್ಲಿಯ ಬಿನ್ನಾಳ ಬಸವೇಶ್ವರ ರಥೋತ್ಸವ ಮಂಗಳವಾರ ಸಂಭ್ರಮದಿಂದ ನಡೆಯಿತು.
ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಪೂಜಾ ವಿಧಿ ವಿಧಾನಗಳನ್ನು ಪೂರೈಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಗ್ರಾಮ ಚವಡಿ ಹತ್ತಿರವಿರುವ ಸಿದ್ರಾಮೇಶ್ವರ ದೇವಸ್ಥಾನವರೆಗೂ ರಥ ಸಾಗಿತು.
ಭಕ್ತರು ಬಿನ್ನಾಳ ಬಸವೆಶ್ವರ ಮಹಾರಾಜ ಕೀ ಎಂದು ಘೋಷಣೆ ಮೊಳಗಿಸಿದರು.
ಇದಕ್ಕೂ ಪೂರ್ವ ಬಿನ್ನಾಳ ಬಸವೇಶ್ವರ ಮೂರ್ತಿಗೆ ಬಾಳೆಹಣ್ಣಿನ ಅಲಂಕಾರದೊಂದಿಗೆ ರುದ್ರಾಭೀಷೇಕ ನೆರವೇರಿಸಲಾಯಿತು. ರಾತ್ರಿ ಮಹಾ ಅನ್ನಪ್ರಸಾದ ನಡೆಯಿತು. ಜಾನಪದ ಕಲಾ ತಂಡದವರಿಂದ ಜಾನಪದ ಸಂಜೆ ಕಾರ್ಯಕ್ರಮ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.