
ಪ್ರಜಾವಾಣಿ ವಾರ್ತೆ
ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಸಮೀಪ ನಡೆದಿರುವ ಉತ್ಖನನದಲ್ಲಿ ಬುಧವಾರ ನಾಗರ ಕಲ್ಲು, ಮೂಳೆಯ ತುಂಡುಗಳು, ಮಡಿಕೆಯ ಚೂರುಗಳು, ಕೆಂಪು ಮಣಿ ಮತ್ತು ಟೆರ‍್ರಾಕೋಟಾದ ವೃತ್ತಾಕಾರದ ಬಿಲ್ಲೆ ಸಿಕ್ಕಿದೆ.
‘ಐದು ದಿನಗಳಿಂದ ಮೂಳೆಗಳು ಸಿಕ್ಕಿರಲಿಲ್ಲ. ಬುಧವಾರ ಎರಡು ಬ್ಲಾಕ್‌ನಲ್ಲಿ ಸಿಕ್ಕಿವೆ. ತಜ್ಞರ ಪರಿಶೀಲನೆ ಬಳಿಕ ಮೂಳೆಗಳು ಯಾವ ಕಾಲಕ್ಕೆ ಸೇರಿದವು ಎಂಬುದು ಗೊತ್ತಾಗಲಿದೆ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.
‘ಇನ್ನು ಎರಡು ಅಡಿ ಆಳ ಉತ್ಖನನ ನಡೆಸಿದರೆ ನೈಜ ಲಕ್ಕುಂಡಿಯ ವೈಭವದ ಮಾಹಿತಿ ಸಿಗುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬುಧವಾರಕ್ಕೆ ಉತ್ಖನನ ಕಾರ್ಯ ಆರು ದಿನ ಪೂರ್ಣಗೊಳಿಸಿದ್ದು, ಆರು ಅಡಿ ಆಳದವರೆಗೆ ಪರಿಶೀಲನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.