ಲಕ್ಷ್ಮೇಶ್ವರ: ತಾಲ್ಲೂಕಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಅಗತ್ಯ ವಸ್ತುಗಳ ಮಾರಾಟ ಭರದಿಂದ ನಡೆದಿದ್ದು, ಹೂವು, ಹಣ್ಣು, ಕಬ್ಬು, ಬಾಳೆಕಂಬ, ವಿದ್ಯುತ್ ದೀಪ, ಆಕಾಶ ಬುಟ್ಟಿ, ಹೊಸ ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಜನರು ಕಳೆದ ಎರಡು ದಿನಗಳಿಂದ ಖರೀದಿಸುತ್ತಿದ್ದಾರೆ.
ಪುರಸಭೆ ವ್ಯವಸ್ಥೆ ಶ್ಲಾಘನೀಯ: ಸಂಚಾರದಟ್ಟಣೆ ಹಾಗೂ ಕಸ ವಿಲೇವಾರಿ ತಪ್ಪಿಸುವ ನಿಟ್ಟಿನಲ್ಲಿ ಪುರಸಭೆ ಈ ಬಾರಿ ಬಾಳೆಕಂಬ ಮತ್ತು ಕಬ್ಬುಗಳ ಮಾರಾಟಕ್ಕೆ ಇಟ್ಟಿಗೇರಿ ಕೆರೆ ಹತ್ತಿರದ ಬಯಲಿನಲ್ಲಿ ವ್ಯವಸ್ಥೆ ಮಾಡಿದೆ. ಇದರಿಂದಾಗಿ ಪಟ್ಟಣದಲ್ಲಿ ಸ್ವಲ್ಪ ಸಂಚಾರ ದಟ್ಟಣೆ ಕಡಿಮೆಯಾಗಿದೆ.
ಹೂವು ದರ ಹೆಚ್ಚಳ: ಲಕ್ಷ್ಮೀ ಪೂಜೆಗೆ ಹೂವು ಅವಶ್ಯವಾಗಿದ್ದು, ದರ ಅಧಿಕವಾಗಿದೆ. ಕೆಜಿ ಸೇವಂತಿಗೆ ಹೂವಿನ ಬೆಲೆ ₹200ರಿಂದ ₹300ಕ್ಕೆ ಮಾರಾಟವಾಗುತ್ತಿದೆ. ಜತೆಗೆ ಹಣ್ಣುಗಳ ಬೆಲೆಯೂ ಹೆಚ್ಚಾಗಿದ್ದು, ಐದು ತರಹದ ಹಣ್ಣುಗಳ ಬೆಲೆ ₹250ಕ್ಕೆ ಮಾರಾಟವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.