ADVERTISEMENT

ಲಕ್ಷ್ಮೇಶ್ವರ | ಮನದ ಕೊಳೆ ತೊಳೆದ ಮಾಚಿದೇವ: ನಾಗರಾಜ ಮಡಿವಾಳರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:58 IST
Last Updated 2 ಫೆಬ್ರುವರಿ 2026, 4:58 IST
ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗೇರಿ ಗ್ರಾಮದಲ್ಲಿ ಭಾನುವಾರ ಜರುಗಿದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿದರು
ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗೇರಿ ಗ್ರಾಮದಲ್ಲಿ ಭಾನುವಾರ ಜರುಗಿದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿದರು   

ಲಕ್ಷ್ಮೇಶ್ವರ: ‘12ನೇ ಶತಮಾನದ ಶಿವಶರಣ ಮಡಿವಾಳ ಮಾಚಿದೇವರು ಕೇವಲ ಮಲಿನ ಬಟ್ಟೆಗಳನ್ನಷ್ಟೆ ತೊಳೆಯಲಿಲ್ಲ. ಅದರೊಂದಿಗೆ ಜನರ ಮನದಲ್ಲಿದ್ದ ಕೊಳೆಯನ್ನೂ ಸಹ ತಮ್ಮ ವಚನಗಳ ಮೂಲಕ ತೊಳೆದ ಮಹಾನ್ ವ್ಯಕ್ತಿ’ ಎಂದು ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಹೇಳಿದರು.

ತಾಲ್ಲೂಕಿನ ರಾಮಗೇರಿ ಗ್ರಾಮದಲ್ಲಿ ತಮ್ಮ ನಿವಾಸದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಾಚಿದೇವರು ಬಸವಣ್ಣನವರ ಅನುವಾಯಿಯಾಗಿ ಆಗಿದ್ದರು. ಕಾಯಕವೇ ಕೈಲಾಸ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡವರು. ಹತ್ತಾರು ವಚನಗಳನ್ನು ಬರೆಯುವ ಮೂಲಕ ಶರಣ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ’ ಎಂದರು.

ADVERTISEMENT

ರಾಮಣ್ಣ ಜಿಡ್ಡಿಮನಿ, ಮಾತಾರ್ಂಡಪ್ಪ ಗಂಜಿಗಟ್ಟಿ, ಪರಸಪ್ಪ ಹುಣಸಿಮರದ, ಖಾಸೀಂಸಾಬ್ ತೆಗ್ಗಿನಮನಿ, ಶಿವಪ್ಪ ಮಡಿವಾಳರ, ಮಲ್ಲೇಶಪ್ಪ ಮಡಿವಾಳರ, ಈರಮ್ಮ ಮಡಿವಾಳರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.