ADVERTISEMENT

ಮಾರುತೇಶ್ವರ ದೇವರಿಗೆ 9 ಕೆ.ಜಿ.ಯ ಬೆಳ್ಳಿ ಕವಚ ದೇಣಿಗೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:34 IST
Last Updated 19 ಫೆಬ್ರುವರಿ 2026, 5:34 IST
ಮಾರುತೇಶ್ವರ ದೇವರ ಬೆಳ್ಳಿ ಕವಚ
ಮಾರುತೇಶ್ವರ ದೇವರ ಬೆಳ್ಳಿ ಕವಚ   

ಗದಗ: ಇಲ್ಲಿಗೆ ಸಮೀಪದ ತಿಮ್ಮಾಪುರ ಗ್ರಾಮದ ಮಾರುತೇಶ್ವರ ದೇವರಿಗೆ 9 ಕೆ.ಜಿ.ಯ ಬೆಳ್ಳಿ ಕವಚದ ಸಮರ್ಪಣೆ ಹಾಗೂ ಮಾರುತೇಶ್ವರ ದೇವರಿಗೆ ಕಾಂತಿ ಮಾಡಿದ ಪ್ರಯುಕ್ತ ಪುನರ್ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಫೆ.19 ಹಾಗೂ 20ರಂದು ವಿಜೃಂಭಣೆಯಿಂದ ನಡೆಯಲಿದೆ.

ಈ ಮೂರ್ತಿಯನ್ನು ಲಕ್ಷ್ಮೀಬಾಯಿ ಶಂಕರಗೌಡ ದೇಸಾಯಿ ಅವರ ಸ್ಮರಣಾರ್ಥ ದೇಸಾಯಿ ಕುಟುಂಬದವರು ದೇಣಿಗೆ ನೀಡಿದ್ದಾರೆ.

ಗುರುವಾರ ಮಾರುತೇಶ್ವರ ಬೆಳ್ಳಿ ಕವಚದ ಮೂರ್ತಿಯ ಭವ್ಯ ಮೆರವಣಿಗೆ 251 ಮಹಿಳೆಯರಿಂದ ಕುಂಭಮೇಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತಗೊಂಡ ರೋಣ ತಾಲ್ಲೂಕು ಹೊಸಳ್ಳಿ ಗ್ರಾಮದ ಮಹಿಳಾ ಡೊಳ್ಳಿನ ಮೇಳ ಮತ್ತು ಗ್ರಾಮದ  ಬೀರಲಿಂಗೇಶ್ವರ, ದುರ್ಗಾದೇವಿ ಡೊಳ್ಳಿನ ಮೇಳ, ಚೌಕಿ ಬಸವೇಶ್ವರ, ಚನ್ನಬಸವೇಶ್ವರ, ಲಕ್ಷ್ಮೀ ನಾರಾಯಣ ಭಜನಾ ಮೇಳ, ಹರಣಶಿಕಾರಿ ಜಾಜ್ ಮೇಳ, ವಿವಿಧ ವಾದ್ಯಗಳೊಂದಿಗೆ ಚೌಕಿ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮಾರುತೇಶ್ವರ ದೇವಸ್ಥಾನ ತಲುಪುವುದು.

ADVERTISEMENT

ಫೆ.20ರಂದು ಕಾಂತಿ ಮಾಡಿದ ಪ್ರಯುಕ್ತ ಮಾರುತೇಶ್ವರ ಪುನರ್ ಪ್ರಾಣ ಪ್ರತಿಷ್ಠಾಪನೆ ಹಾಗೂ ಹೋಮ ಹವನದೊಂದಿಗೆ ಅನೇಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಎರಡು ದಿನಗಳ ಕಾಲ ನಿರಂತರ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಈ ಮಹಾ ದಾಸೋಹದಕ್ಕೆ ಗ್ರಾಮದ ಮಹಿಳೆಯರು ಹಾಗೂ ಭಕ್ತಾದಿಗಳಿಂದ ಕರಿಗಡಬು, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಬಾದಾಮಿ ಪುರಿ, ರವಾ ಉಂಡಿ, ಜಿಲೇಬಿ, ಬೂಂದೆ, ಕೇಸರಿಬಾತ್‌, ಮಾದ್ಲಿ, ಮೈಸೂರು ಪಾಕ್, ರೊಟ್ಟಿ ಚಪಾತಿ ಬದನೆಕಾಯಿ ಪಲ್ಯ ಕಾಳು ಪಲ್ಯ ಅನ್ನ ಸಾಂಬಾರು ವಿವಿಧ ಖಾದ್ಯಗಳನ್ನು ತಯಾರಿಸಿ ಪ್ರಸಾದಕ್ಕೆ ಉಣಬಡಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.