ADVERTISEMENT

ಕಲ್ಮಶ ದೂರ ಮಾಡುವ ದೇವಾಲಯ: ಸಂಯುಕ್ತಾ ಕೆ. ಬಂಡಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 6:59 IST
Last Updated 4 ಫೆಬ್ರುವರಿ 2026, 6:59 IST
ನರೇಗಲ್ ಹೊರವಲಯದ ಚಿಕ್ಕೊಪ್ಪದವರ ಜಮೀನಿನಲ್ಲಿ ಮರು ಪ್ರತಿಷ್ಠಾಪಿಸಲಾದ ಹುಲಗೆಮ್ಮ ದೇವಿ ಮೂರ್ತಿ, ನೂತನ ರೇವಣಸಿದ್ದೇಶ್ವರ ಹಾಗೂ ಬಸವಣ್ಣ ಮೂರ್ತಿಗಳ ಪ್ರತಿಷ್ಠಾಪನೆ ಸಮಾರಂಭದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು
ನರೇಗಲ್ ಹೊರವಲಯದ ಚಿಕ್ಕೊಪ್ಪದವರ ಜಮೀನಿನಲ್ಲಿ ಮರು ಪ್ರತಿಷ್ಠಾಪಿಸಲಾದ ಹುಲಗೆಮ್ಮ ದೇವಿ ಮೂರ್ತಿ, ನೂತನ ರೇವಣಸಿದ್ದೇಶ್ವರ ಹಾಗೂ ಬಸವಣ್ಣ ಮೂರ್ತಿಗಳ ಪ್ರತಿಷ್ಠಾಪನೆ ಸಮಾರಂಭದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು   

ನರೇಗಲ್: ‘ಮಠ, ಮಂದಿರಗಳ ಸಂಸ್ಕೃತಿ ನಮ್ಮ ದೇಶದ ಧಾರ್ಮಿಕ ಶ್ರೀಮಂತಿಕೆಯ ಸಂಕೇತವಾಗಿದೆ’ ಎಂದು ಗಜೇಂದ್ರಗಡ ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತಾ ಕೆ. ಬಂಡಿ ಹೇಳಿದರು.

ನರೇಗಲ್ ಹೊರವಲಯದ ಚಿಕ್ಕೊಪ್ಪದವರ ಜಮೀನಿನಲ್ಲಿ ಈಚೆಗೆ ನಡೆದ ಹುಲಗೆಮ್ಮ ದೇವಿ ಮೂರ್ತಿ ಮರು ಪ್ರತಿಷ್ಠಾಪನೆ, ನೂತನ ರೇವಣಸಿದ್ದೇಶ್ವರ ಹಾಗೂ ಬಸವಣ್ಣ ಮೂರ್ತಿಗಳ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮಾತನಾಡಿದರು.

‘ಇಲ್ಲಿನ ಹುಲಗೆಮ್ಮ ದೇವಿ ದೇವಾಲಯ 1978 ರಲ್ಲಿಯೇ ಚಿಕ್ಕೊಪ್ಪದವರ ಮನೆತನದ ಪೂರ್ವಜರಿಂದ ಪ್ರತಿಷ್ಠಾಪನೆಗೊಂಡದ್ದು, ಅದನ್ನು ಜೀರ್ಣೋದ್ಧಾರಗೊಳಿಸಿ, ಇನ್ನೇರಡು ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಯಿತು’ ಎಂದರು.

ADVERTISEMENT

ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಆಶಿರ್ವಚನ ನೀಡಿದರು.

ಹಿರಿಯರನ್ನು ಸನ್ಮಾನಿಸಲಾಯಿತು. ಸಿದ್ಧಲಿಂಗಪ್ಪ ಚಿಕ್ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರದ ರುದ್ರಪ್ಪ ತೋಟದ, ಲಕ್ಕುಂಡಿಯ ಜಿ.ಪಂ. ಮಾಜಿ ಸದಸ್ಯ ಶಾಂತಪ್ಪ ಕಲಕೇರಿ, ಮುತ್ತಣ್ಣ ಪಲ್ಲೇದ, ಶಾಂತಪ್ಪ ಚಿಕ್ಕೊಪ್ಪದ ಹಾಗೂ ಮೆಣಸಗಿಯ ವೆಂಕಪ್ಪ ಬಾಣದ ಮಾತನಾಡಿದರು. ವೀರಪ್ಪ ಸೊಪ್ಪಿನ, ಶೋಕಪ್ಪ ಪವಾಡಶೆಟ್ಟರ, ರಾಚಪ್ಪ ಕೊಟಗಿ, ಚಂದ್ರೇಶಖರ ಕಾಳಗಿ, ಗಂಗಾಧರ ಕೊಟಗಿ, ವೀರಣ್ಣ ಪಟ್ಟಣಶೆಟ್ಟಿ, ವಿರಪಾಕ್ಷಪ್ಪ ಕೊಡಗಲಿ, ಪಾರ್ವತೆಮ್ಮ ಚಿಕ್ಕೊಪ್ಪದ ಹಾಗೂ ಬಸವಣ್ಣೆಮ್ಮ ಕಾಳಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.