ADVERTISEMENT

ಡಂಬಳ ವ್ಯಾಪ್ತಿಯಲ್ಲಿ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 16 ಮೇ 2024, 14:28 IST
Last Updated 16 ಮೇ 2024, 14:28 IST
ಡಂಬಳ ಗ್ರಾಮದಲ್ಲಿ ಗುರುವಾರ ಸುರಿದ ಮಳೆಯಲ್ಲಿ ಕೃಷಿ ಚಟುವಟಿಕೆಗೆ ಜಮೀನುಗಳಗೆ ಹೋಗಿದ್ದ ತಾಯಿ ಮತ್ತು ಮಗಳು ವಸ್ತ್ರ ತಲೆಮೇಲೆ ಹಾಕಿಕೊಂಡು ಮಳೆಯಲ್ಲಿ ಬರುತ್ತಿರುವ ಚಿತ್ರಣ
ಡಂಬಳ ಗ್ರಾಮದಲ್ಲಿ ಗುರುವಾರ ಸುರಿದ ಮಳೆಯಲ್ಲಿ ಕೃಷಿ ಚಟುವಟಿಕೆಗೆ ಜಮೀನುಗಳಗೆ ಹೋಗಿದ್ದ ತಾಯಿ ಮತ್ತು ಮಗಳು ವಸ್ತ್ರ ತಲೆಮೇಲೆ ಹಾಕಿಕೊಂಡು ಮಳೆಯಲ್ಲಿ ಬರುತ್ತಿರುವ ಚಿತ್ರಣ   

ಡಂಬಳ: ಡಂಬಳ ವ್ಯಾಪ್ತಿಯಲ್ಲಿ ಗುರುವಾರ ಸಾಧಾರಣ ಮಳೆ ಆಗಿದೆ. ಮಧ್ಯರಾತ್ರಿ ಸುರಿದ ಮಳೆಯಿಂದ ಜನತೆಗೆ ಸ್ವಲ್ಪ ನೆಮ್ಮದಿ ನೀಡಿದಂತೆ ಆಗಿದೆ.

ಮಂಗಳವಾರ ಮಧ್ಯರಾತ್ರಿ ಮತ್ತು ಗುರುವಾರ ಮಳೆ ಸುರಿದ ಪರಿಣಾಮ ತಣ್ಣಗಿನ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ಹಸಿರು ಮೂಡಿದೆ.

ಡಂಬಳ ಹೋಬಳಿ ಕೇಂದ್ರಸ್ಥಾನ ಸೇರಿದಂತೆ ಹಳ್ಳಿಕೇರಿ, ಹಳ್ಳಿಗುಡಿ, ಪೇಠಾಲೂರ, ವೆಂಕಟಾಪುರ ಹಿರೇವಡ್ಡಟ್ಟಿ, ಡೋಣಿ, ಕದಾಂಪುರ, ಚಿಕ್ಕವಡ್ಡಟ್ಟಿ, ಮೇವುಂಡಿ, ಯಕಲಾಸಪುರ ಮುಂತಾದ ಗ್ರಾಮದಲ್ಲಿ ಗುರುವಾರ ಮಳೆ ಆಗಿದೆ. ಮುಂಗಾರು ಹಂಗಾಮಿನಲ್ಲಿ ಜಮೀನುಗಳನ್ನು ಹದಗೊಳಿಸಲು ಕೃಷಿ ಚಟುವಟಿಕೆಗೆ ಹೋಗಿದ್ದ ಕೂಲಿ ಕಾರ್ಮಿಕರು ಹಾಗೂ ರೈತರು ಸಾಧಾರಣ ಮಳೆಯಲ್ಲಿ ನೆನೆಯುತ್ತ ಹೋಗುತ್ತಿದ್ದ ಚಿತ್ರಣ ಕಂಡುಬಂತು.

ADVERTISEMENT

ಜಿಟಿಜಿಟಿ ಮಳೆ ಪರಿಣಾಮ ವಿವಿಧ ಗ್ರಾಮ ಹಾಗೂ ನಗರ ಪ್ರದೇಶಗಳಿಗೆ ಹೋಗಿದ್ದ ಜನ ಮರಳಿ ಬರುವಾಗ ಅನಿರೀಕ್ಷಿತವಾಗಿ ಮಳೆ ಸುರಿದ ಪರಿಣಾಮ ತೊಯ್ಯಿಸಿಕೊಂಡು ಮನೆಗೆ ಹೋದರು. ಜಿಟಿ ಜಿಟಿ ಮಳೆ ಹಾಗೂ ಮೋಡ ಕವಿದ ವಾತಾವರಣ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.