ನರಗುಂದ: ನರಗುಂದ ತಾಲ್ಲೂಕು ಸೇರಿದಂತೆ ಸುತ್ತಲಿನ 9 ತಾಲ್ಲೂಕುಗಳಿಗೆ ಕುಡಿಯಲು ಹಾಗೂ ಮಲಪ್ರಭಾ ಕಾಲುವೆ ಗಳಿಗೆ ನೀರು ಹರಿಸುವ ಸವದತ್ತಿ ಬಳಿಯ ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯ ಭರ್ತಿಯಾಗಿದೆ.
ಇದರಿಂದ ಹರ್ಷಗೊಂಡ ರೈತರು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್.ಪಾಟೀಲ ನೇತೃತ್ವದಲ್ಲಿ ರೈತರು ಶುಕ್ರವಾರ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಸ್.ಪಾಟೀಲ ಅವರು, ಮಲಪ್ರಭಾ ನದಿ ಈ ಭಾಗದಲ್ಲಿ ವರವಾಗಿದೆ. ಇದ ರಿಂದ ಭರ್ತಿಯಾದ ಜಲಾಶಯ ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟಿ ನೂರಾರು ಗ್ರಾಮಗಳ ಜಮೀನುಗಳಿಗೆ ಕಾಲುವೆ ಮೂಲಕ ನೀರು ಪೂರೈಕೆ ಮಾಡುತ್ತದೆ. ಇದು ಭರ್ತಿಯಾಗಿದ್ದು ರೈತರಲ್ಲಿ ಹರ್ಷ ತಂದಿದೆ. ಈ ಜಲಾಶಯ ಪ್ರತಿ ವರ್ಷ ಭರ್ತಿಯಾಗಿ ಈ ಭಾಗದ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲಿ ಎಂದು ದೇವರಲ್ಲಿ ರೈತರ ಪರವಾಗಿ ಬಾಗಿನ ಅರ್ಪಿಸಿ ಪ್ರಾರ್ಥಿಸ ಲಾಗಿದೆ ಎಂದರು.
ಆದರೆ ನೀರಾವರಿ ಇಲಾಖೆ ಸಮರ್ಪಕವಾಗಿ ಕಾಲುವೆ ನಿರ್ವಹಣೆ ಮಾಡಿ ರೈತರ ಜಮೀನುಗಳಿಗೆ ನೀರು ಹರಿಸಲು ಅನುಕೂಲ ಮಾಡಿಕೊಡು ವಂತೆ ಒತ್ತಾಯಿಸಿದರು.
ತಾಲ್ಲೂಕು ಅಧ್ಯಕ್ಷ ನಾಗೇಶ ಅಪ್ಪೋಜಿ, ಬಸವರಾಜ ಗಂಗೋಡಿ, ಹನಮಂತ ಹಡಗಲಿ, ಮಲ್ಲನಗೌಡ ಪರವ್ವನವರ, ಹನಮಂತಪ್ಪ ಮಲ್ಲಾ ಪುರ, ಮುತ್ತು ಯಾಲಿಗಾರ, ವಿಠ್ಠಲ ಮುಧೋಳೆ, ಅಣ್ಣಪ್ಪ ಮಾನೆ, ಯೋಗೇಶ್ ಗುಡಾರದ, ಅಶೋಕ ಪಾಟೀಲ, ಬಸವ ರಾಜ ಘಾಟಗೆ, ಶಿವಕುಮಾರ್ ಗಾಣಗಿ, ರಾಮರಾಜ ಇನಾಮದಾರ, ಚಿದಂಬರ ಪಾಟೀಲ, ಕಾಸೀಂಸಾಬ್ ಜಕಾತಿ, ಉಮೇಶ ಉಪ್ಪಾರ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.