ರೋಣ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹೊಳೆಆಲೂರ ಸಾಲಗಾರ ಮತಕ್ಷೇತ್ರಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಚ್ಚರಗೌಡ ವೆಂಕನಗೌಡ ಗೋವಿಂದಗೌಡ್ರ ಗೆಲುವು ಸಾಧಿಸಿದರು.
ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುಲ್ಲಪ್ಪ ಬಸವರಾಜ ಕೆಂಗಾರ ಅವರ ವಿರುದ್ಧ 5 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಒಟ್ಟು 196 ಸದಸ್ಯರಲ್ಲಿ ಗೋವಿಂದಗೌಡ್ರ 87, ಕೆಂಗಾರ 82 ಮತಗಳನ್ನು ಪಡೆದರು.
ನಿಡಗುಂದಿ ಸಾಲಗಾರರ ಕ್ಷೇತ್ರದಿಂದ ರಮೇಶ ಪಲ್ಲೇದ, ಹಿರೇಹಾಳ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಸನಗೌಡ ಕರಿಗೌಡರ, ಗಜೇಂದ್ರಗಡ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಈಶಪ್ಪ ರಾಠೋಡ, ಸೂಡಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಶೇಖರಪ್ಪ ಅಬ್ಬಿಗೇರಿ, ಮುಶಿಗೇರಿ ಸಾಲಗಾರರ ಹಿಂದುಳಿದ ಪ್ರವರ್ಗ 3ಬಿ ಕ್ಷೇತ್ರದಿಂದ ಶರಣಯ್ಯ ಮಾಸ್ತಿಗಟ್ಟಿ ಜಯಗಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ವಿ.ಆರ್.ಗುಡಿಸಾಗರ, ಪಿ.ಬಿ.ಅಳಗವಾಡಿ, ಬಸನಗೌಡ ಪೊಲೀಸ್ ಪಾಟೀಲ, ನಿಂಗಪ್ಪ ಬದಾಮಿ, ಬಾಳಪ್ಪ ಖ್ಯಾಡ, ರಂಗನಗೌಡ ಪಾಟೀಲ, ಹೇಮಂತಗೌಡ ಬಾಲನಗೌಡ್ರ, ಮಾದೇಗೌಡ ಭೀಮನಗೌಡ್ರ, ಮಹಾಗುಂಡಪ್ಪ ಬಾವಿ, ವೀರನಗೌಡ ಭೀಮನಗೌಡ್ರ, ವೆಂಕನಗೌಡ ಗೋವಿಂದಗೌಡ್ರ, ವೀರನಗೌಡ ಗಿಡ್ಡಮಣ್ಣವರ, ಶೇಖರಗೌಡ ಬಾಳನಗೌಡ್ರ, ಕುಬೇರಗೌಡ ಭೀಮನಗೌಡ್ರ, ಶಿವುಕುಮಾರ ಬಾವಿ, ರವಿ ವಡ್ಡರ ಸೇರಿದಂತೆ ಅನೇಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.