ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ‘ಕರ್ಣ ದೈವ ಕುಟುಂಬಕಂ’ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:30 IST
Last Updated 31 ಡಿಸೆಂಬರ್ 2020, 19:30 IST
ಲಾಕ್‌ಡೌನ್‌ ಸಂದರ್ಭದಲ್ಲಿ ಲಕ್ಷ್ಮೇಶ್ವರದ ಕರ್ಣ ದೈವ ಕುಟುಂಬಕಂ ಸಂಸ್ಥೆ ಸದಸ್ಯರು ಚೆಕ್‌ಪೋಸ್ಟ್ ಸಿಬ್ಬಂದಿಗೆ ಆಹಾರ ವಿತರಿಸಿದ ಕ್ಷಣ
ಲಾಕ್‌ಡೌನ್‌ ಸಂದರ್ಭದಲ್ಲಿ ಲಕ್ಷ್ಮೇಶ್ವರದ ಕರ್ಣ ದೈವ ಕುಟುಂಬಕಂ ಸಂಸ್ಥೆ ಸದಸ್ಯರು ಚೆಕ್‌ಪೋಸ್ಟ್ ಸಿಬ್ಬಂದಿಗೆ ಆಹಾರ ವಿತರಿಸಿದ ಕ್ಷಣ   

ಲಾಕ್‍ಡೌನ್ ಘೋಷಣೆ ನಂತರ ಬಹಳಷ್ಟು ಜನ ನಿರ್ಗತಿಕರಾಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಉದ್ಭವಿಸಿತ್ತು. ಪೊಲೀಸ್, ಕಂದಾಯ, ಪುರಸಭೆ, ಆರೋಗ್ಯ ಇಲಾಖೆಗಳ ನೌಕರರು ಊಟ, ನಿದ್ರೆ ಮರೆತು ಕರ್ತವ್ಯದಲ್ಲಿ ನಿರತರಾಗಿದ್ದರು. ಅವರಿಗೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ಚಹಾ ಸಹಿತ ಸಿಗದ ಪರಿಸ್ಥಿತಿ ಇದ್ದಾಗ, ಊಟ, ಉಪಾಹಾರ ಮತ್ತು ಚಹಾ ವಿತರಿಸುವ ಕೆಲಸ ಕೈಗೊಂಡೆವು.

ಅಭಿಷೇಕ ಡೊಂಬರ, ಶಿವರಾಜ ಅಂಕಲಕೋಟಿ, ವೀರೇಶ ಹಿರೇಮಠ, ಅಭಿಷೇಕ ಕುಲಕರ್ಣಿ, ವಿನಯ ಅಂಕಲಕೋಟಿ, ದರ್ಪಣ ಜೈನ್ ಸೇರಿದಂತೆ 21ಜನರಿದ್ದೇವೆ.

ಸಮಾಜ ಸೇವೆಯ ಉದ್ದೇಶದಿಂದಲೇ ಒಂದಾದ ಯುವಕರು ಸ್ವಂತ ಹಣದಿಂದ ಊಟ ಸಿದ್ಧಪಡಿಸಿ ಎರಡು ತಿಂಗಳವರೆಗೆ ವಿತರಿಸಿದೆವು. ಪದಾಧಿಕಾರಿಗಳು ಎಂಜಿನಿಯರ್ ಆಗಿದ್ದು ಒಂದು ತಿಂಗಳ ಸಂಬಳವನ್ನು ಈ ಕೆಲಸಕ್ಕಾಗಿ ತೆಗೆದಿಟ್ಟರು. 50 ಜನರಿಗೆಂದುಕೊಂಡಿದ್ದು, 550ರವರೆಗೆ ಏರಿತು. ದಿನಕ್ಕೆ ₹13 ಸಾವಿರ ಖರ್ಚು ಬರುತ್ತಿತ್ತು.

ADVERTISEMENT

ಇವರ ಸೇವೆಯನ್ನು ಗಮನಿಸಿದ ಬಜಾರ ವ್ಯಾಪಾರಸ್ಥರ ಸಂಘ ಮತ್ತು ಎಪಿಎಂಸಿ ವರ್ತಕರ ಸಂಘದವರು ಕಿರಾಣಿ ಸಾಮಾನುಗಳನ್ನು ಕೊಡಿಸಲು ಮುಂದಾದರು. 45 ದಿನಗಳವರೆಗೆ ಸಂಸ್ಥೆ ಹಸಿದವರಿಗೆ ಊಟ ಬಡಿಸಿದೆ. ಮೂಕ ಪ್ರಾಣಿ ನಾಯಿಗಳಿಗೂ ಸಹ ಅನ್ನ ನೀಡಿದೆವು. ಹಸಿವಿನಿಂದ ಸಾಯಬಾರದೆಂಬ ಉದ್ದೇಶ ಈಡೇರಿದ ತೃಪ್ತಿ ಇದೆ.

–ಚಂದ್ರ ಬಂಡಿವಾಡ,ಅಧ್ಯಕ್ಷರು ‘ಕರ್ಣ ದೈವ ಕುಟುಂಬಕಂ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.