
ರೋಣ: ಮದ್ಯ ಅಕ್ರಮ ಮಾರಾಟ ತಡೆಗೆ ಆಗ್ರಹಿಸಿ ತಾಲ್ಲೂಕಿನ ಮಾಡಲಗೇರಿ ಗ್ರಾಮಸ್ಥರು ಪಟ್ಟಣದ ಅಬಕಾರಿ ಇಲಾಖೆ ನಿರೀಕ್ಷಕಿ ಶ್ರೀದೇವಿ ಕೊಳ್ಳಿ ಅವರಿಗೆ ಗುರುವಾರ ಎರಡನೇ ಬಾರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಅಬಕಾರಿ ಕಚೇರಿ, ತಹಶೀಲ್ದಾರ್ ಕಾರ್ಯಾಲಯ, ಪೊಲೀಸ್ ಠಾಣೆಗಳಿಗೆ ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಮದ್ಯ ಅಕ್ರಮ ಮಾರಾಟ ತಡೆಗೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು, ಮದ್ಯ ಅಕ್ರಮ ಮಾರಾಟ ಮಾಡುವ ಅಂಗಡಿಗಳಿಗೆ ದಾಳಿ ನಡೆಸಿ ಮದ್ಯ ಮಾರಾಟ ಮಾಡದಂತೆ ತಾಕೀತು ಮಾಡಿದ್ದರು. ಇದೀಗ ಎಂದಿನಂತೆ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಕುರಿತು ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಮಹಾದೇವಪ್ಪ ಭಾವಿ, ಬಸನಗೌಡ ಬಾಳನಗೌಡ್ರ, ಶಿವಾನಂದ ಭಾವಿ, ಶಂಕರಗೌಡ ಹಿರೇಸಕ್ಕರಗೌಡ್ರ, ಹನುಮವ್ವ ಭೀಮನಗೌಡ್ರ, ಶಂಕ್ರವ್ವ ಶಿರಗುಂಪಿ, ರತ್ನವ್ವ ಮಂಡಸೊಪ್ಪಿ, ಯಲ್ಲವ್ವ ರಾಯನಗೌಡ್ರ, ಶಂಕ್ರವ್ವ ರಾಯನಗೌಡ್ರ, ಭೀಮವ್ವ ಭಾವಿ, ಶೇಖವ್ವ ಪಾಟೀಲ, ಶಿವಗಂಗವ್ವ ಭೀಮನಗೌಡ್ರ, ಶಂಕ್ರವ್ವ ಹಿರೇಸಕ್ಕರಗೌಡ್ರ, ಲಲಿತಾ ಹಿರೇಸಕ್ಕರಗೌಡ್ರ, ಶಂಕ್ರವ್ವ ಬಾಲನಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.