ADVERTISEMENT

ಲಕ್ಷ್ಮೇಶ್ವರ | ಡಾ.ಸಂಗಮೇಶ ತಮ್ಮನಗೌಡ್ರ ಜಿಲ್ಲಾ ಅಧ್ಯಕ್ಷರಾಗಿ ನೇಮಕ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:20 IST
Last Updated 8 ಫೆಬ್ರುವರಿ 2026, 3:20 IST
ಡಾ.ಸಂಗಮೇಶ ತಮ್ಮನಗೌಡ್ರ
ಡಾ.ಸಂಗಮೇಶ ತಮ್ಮನಗೌಡ್ರ   

ಲಕ್ಷ್ಮೇಶ್ವರ: ಕೇರಳ ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯವು ಕಳೆದ 25 ವರ್ಷಗಳಿಂದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಡಾ.ವಾಮನರಾವ್ ಬೇಕಲ್ ಹಲವಾರು ಜನಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ಕೊಡುವುದರ ಮೂಲಕ ಕನ್ನಡದ ಕಾರ್ಯಕ್ರಮ ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ.

ಈ ಕಾರ್ಯವನ್ನು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಗೂ ವ್ಯಾಪಿಸಿದ್ದು, ಗದಗ ಜಿಲ್ಲಾ ಅಧ್ಯಕ್ಷರನ್ನಾಗಿ ಬರಹಗಾರ, 115 ಕೃತಿ ರಚಿಸಿದ ಹಾಗೂ ವರಕವಿ ಡಾ.ದ.ರಾ.ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ಅಧ್ಯಕ್ಷ, ಪ್ರಜ್ಞಾವಿಕಾಸ ಚಿಂತನಶೀಲ ಅಕಾಡೆಮಿಯ ಸಂಸ್ಥಾಪಕ, ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಲಕ್ಷ್ಮೇಶ್ವರದ ಡಾ.ಸಂಗಮೇಶ ತಮ್ಮನಗೌಡ್ರ ಅವರನ್ನು ನೇಮಕ ಮಾಡಿದ್ದಾರೆ.

ವರಕವಿ ಡಾ.ದ.ರಾ.ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ರಾಮಗಿರಿ ಕಾರ್ಯದರ್ಶಿ ಶಂಕ್ರಪ್ಪ ಶಿಳ್ಳಿನ, ಲಕ್ಷ್ಮೇಶ್ವರ ಉಮಾ ವಿದ್ಯಾಲಯದ ಮುಖ್ಯಶಿಕ್ಷಕ ಸುಭಾಷ ಪೂಜಾರ ಹಾಗೂ ಮುಳಗುಂದ ಕೋಟೆ ಓಣಿಯ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಮಹಾಂತೇಶ ಕಣವಿ ತಮ್ಮನಗೌಡ ಅವರನ್ನು ಅಭಿನಂದಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.