ನರಗುಂದ: ಸುಪ್ರೀಂಕೋರ್ಟ್ ನ್ಯಾಯಾಧೀಶ ಬಿ.ಆರ್.ಗವಾಯಿವರ ಮೇಲೆ ಅಲ್ಲಿನ ಹಿರಿಯರ ವಕೀಲರಿಂದ ನಡೆದ ಹಲ್ಲೆ ಖಂಡಿಸಿ ಪಟ್ಟಣದಲ್ಲಿ ದಲಿತ ಪರ, ಕನ್ನಡ ಪರ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದಿಂದ ತಹಶೀಲ್ದಾರ ಮೂಲಕ ಶುಕ್ರವಾರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ಚಲವಾದಿ ಸುಪ್ರೀಂಕೋರ್ಟ್ ನಂತಹ ಪವಿತ್ರ ಸ್ಥಳದಲ್ಲಿ ಅಲ್ಲಿನ ನ್ಯಾಯಾಧೀಶ ರ ಮೇಲೆ ಶೂ ಎಸೆಯಲು ಮುಂದಾದ ವಕೀಲ ವೇಷ ಹಾಕಿದ ಭಯೋತ್ಪಾದಕ ರಾಕೇಶ ಕಿಶೋರನನ್ನು ಗಡಿಪಾರು ಮಾಡಬೇಕು. ಅವರ ಆಸ್ತಿಯನ್ನು ಮುಟ್ಟು ಗೋಲು ಹಾಕಬೇಕು.ಮನುವಾದಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನದಲ್ಲಿ ಎಲ್ಲರೂ ಗೌರವದಿಂದ ಬದುಕಲು ಅವಕಾಶಗಳನ್ನು ಕಲ್ಪಿಸಿದ್ದಾರೆ. ಜಾತ್ಯತೀತ ಕಲ್ಪನೆಯನ್ನು ಸಹಿಸಲಾರದ ಮನುವಾದಿಗಳು, ಆಗಾಗ್ಗೆ ಸಂವಿಧಾನದ ಆಶಯಗಳಿಗೆ ಭಂಗ ತರುವ ತಂತ್ರ ಹೂಡುತ್ತಿರುವುದು ತೀವ್ರ ಖಂಡನೀಯ ಎಂದರು.
ಈ ಸಂದರ್ಭದಲ್ಲಿ ದತ್ತು ಜೋಗಣ್ಣವರ,ನಬೀಸಾಬ ಕಿಲ್ಲೇದಾರ, ಶರಣು ಚಲವಾದಿ, ಮಂಜು ರಂಗಣ್ಣವರ, ಗುರು ಕೆಂಗರಕರ, ಫಾರೂಕ್, ಬಸು ಪೂಜಾರ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.