ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರು ಪೂರೈಕೆಯಲ್ಲಿ ಪುರಸಭೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಪಟ್ಟಣದ 14 ಹಾಗೂ 15ನೇ ವಾರ್ಡ್ ನಿವಾಸಿಗಳು ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ವರ್ಷದಲ್ಲಿ 7-8 ಬಾರಿ ಮಾತ್ರ ನೀರು ಪೊರೈಕೆಯಾಗುತ್ತಿದ್ದು, ನೀರಿನ ಕರ ಮಾತ್ರ ತಪ್ಪದೆ ತುಂಬಿಸಿಕೊಳ್ಳುತ್ತಿದ್ದಾರೆ. ಪೈಪ್‍ಲೈನ್ ದುರಸ್ತಿ, ಮೋಟರ್ ಸಮಸ್ಯೆ ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಸಮರ್ಪಕ ನೀರು ಪೂರೈಸದಿದ್ದಲ್ಲಿ ನೀರಿನ ಕರ ಪಾವತಿಸುವುದಿಲ್ಲ ಎಂದು ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ ‘ನೀರಿನ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು. ನಂತರ 12 ದಿನಕ್ಕೊಮ್ಮೆ ನೀರು ಬಿಡುತ್ತೇವೆ’ ಎಂದು ಭರವಸೆ ನೀಡಿದರು.
ಪುರಸಭೆ ಸದಸ್ಯ ಮಹೇಶ ಹುಲಬಜಾರ, ಅಮರೀಶ ಗಾಂಜಿ, ಮಂಜುನಾಥ ಗಾಂಜಿ, ಪ್ರವೀಣ ಬೋಮಲೆ, ಮಲ್ಲನಗೌಡ ಪಾಟೀಲ, ಶಕ್ತಿ ಕತ್ತಿ, ಸಚಿನ ಕರ್ಜಕಣ್ಣವರ, ಭರತೇಶ ಪಾಟೀಲ, ಮಹಾಂತೇಶ ತಟ್ಟಿ, ಮಹಾಂತೇಶ ತೋಟದ, ಹನುಮಂತ ರಾಮಗೇರಿ, ಆಕಾಶ ಸೌದತ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.