ADVERTISEMENT

29ರಿಂದ ಪೇ ಚಾನಲ್ ಸ್ಥಗಿತ

ಸಿ.ಎಂ ಕುಮಾರಸ್ವಾಮಿಗೆ ಮನವಿ ಸಲ್ಲಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 9:25 IST
Last Updated 18 ಡಿಸೆಂಬರ್ 2018, 9:25 IST
ಚಂದ್ರೇಗೌಡ
ಚಂದ್ರೇಗೌಡ   

ಹಾಸನ: ಟಿವಿ ಚಾನಲ್‌ಗಳಿಗೆ ಪ್ರತ್ಯೇಕ ದರ ನಿಗದಿಪಡಿಸುವ ಮೂಲಕ ಕೇಂದ್ರ ಸರ್ಕಾರ ಕೇಬಲ್‌ ಆಪರೇಟರ್‌ಗಳು ಹಾಗೂ ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ಮಾಡುತ್ತಿದೆ ಎಂದು ಜಿಲ್ಲಾ ಡೆನ್‌ ಕೇಬಲ್‌ ಆಪರೇಟರ್ಸ್‌ ಸಂಘದ ಅಧ್ಯಕ್ಷ ಚಂದ್ರೇಗೌಡ ಆರೋಪಿಸಿದರು.

ಡಿ.29ರಿಂದ ಎಲ್ಲ ಉಚಿತ ಚಾನಲ್‌ ಬಿಟ್ಟು ಉಳಿದ ಚಾನಲ್‌ಗಳು ಸ್ಥಗಿತಗೊಳ್ಳಲಿವೆ. ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಿ ಶೀಘ್ರದಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯಲ್ಲಿ ಇದುವರೆಗೂ ₹ 225 ರಿಂದ 250 ಕೇಬಲ್‌ ಶುಲ್ಕ ಸಂಗ್ರಹಿಸಲಾಗುತ್ತಿದೆ. ಹೊಸ ನಿಯಮ ಜಾರಿಗೆ ಬಂದರೆ ಕನಿಷ್ಠ ₹ 1500 ಪಾವತಿಸಬೇಕಾಗುತ್ತದೆ. ದೊಡ್ಡ ಮೊತ್ತದ ಹಣ ನೀಡಿ ಯಾರೂ ಟಿ. ವಿ ನೋಡಲು ಬಯಸುವುದಿಲ್ಲ. ಹಾಗಾಗಿ ಕೇಬಲ್‌ ಆಪರೇಟರ್‌ಗಳು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಕೇಂದ್ರದ ನಿರ್ಧಾರ ಗ್ರಾಹಕರ ಮೇಲೆ ಹೊರೆ ಬೀಳಲಿದ್ದು, ಎಲ್ಲರೂ ಇದನ್ನು ವಿರೋಧಿಸಬೇಕು’ ಎಂದು ಮನವಿ ಮಾಡಿದರು.
ಅಮೋಘ್ ವಾಹಿನಿ ವ್ಯವಸ್ಥಾಪಕ ಜ್ಞಾನೇಶ್‌ ಬಾಬು, ಸಂಘದ ಉಪಾಧ್ಯಕ್ಷ ಶಬೀರ್‌ ಅಹಮದ್‌, ಖಜಾಂಚಿ ಮಲ್ಲಿಕಾರ್ಜುನ್‌, ಕಾರ್ಯದರ್ಶಿ ಶಶಿಕುಮಾರ್‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.