ಸಾವು (ಪ್ರಾತಿನಿಧಿಕ ಚಿತ್ರ)
ಚನ್ನರಾಯಪಟ್ಟಣ (ಹಾಸನ ಜಿಲ್ಲೆ): ಹೊರವಲಯದ ಕಗ್ಗಲಿಕಾವಲು ಬಳಿ ಭಾನುವಾರ ಇನ್ನೋವಾ ಕಾರು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರು.
ಬೆಂಗಳೂರಿನ ಬಸವರಾಜು (20) ಹಾಗೂ ಅನುಶ್ರೀ (20) ಮೃತರು. ಅನುಶ್ರೀ ಸೋದರ ಸಂಬಂಧಿ ಛಾಯಾ ಗಾಯಗೊಂಡಿದ್ದಾರೆ. ಮತ್ತೊಂದು ಬೈಕಿನಲ್ಲಿದ್ದ ಚನ್ನರಾಯಪಟ್ಟಣದ ಮಹಮದ್ ಶಾಹಿದ್ ಸಹ ಗಾಯಗೊಂಡಿದ್ದಾರೆ. ಇವರು ದ್ವಿಚಕ್ರವಾಹನಗಳಲ್ಲಿ ತೆರಳುತ್ತಿದ್ದರು.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.