ಹೊಳೆನರಸೀಪುರ: ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ನಿಡುವಣಿ ಗ್ರಾಮದ ಬಸವೇಶ್ವರ ದೇವಾಲಯ ಜೀರ್ಣೋದ್ಧಾರಗೊಂಡಿದ್ದು, ಫೆ.24ರಂದು ಲೋಕಾರ್ಪಣೆಗೊಳ್ಳಲಿದೆ.
ಇದರ ಅಂಗವಾಗಿ ಫೆ.21ರಂದು ಸಂಜೆ 4.30ರಿಂದ ಗಂಗಾಪೂಜೆ, ಬಸವೇಶ್ವರ ಶಿಲಾ ಮೂರ್ತಿ ಮೆರವಣಿಗೆ ಮೂಲಕ ದೇವಾಲಯ ಪ್ರವೇಶ, ನಂತರ ಪೂಜಾ ವಿಧಿ ವಿಧಾನಗಳು ನಡೆಯಲಿವೆ. 22ರಂದು ಬೆಳಿಗ್ಗೆ 7ಕ್ಕೆ ಬಾಳೆಹೊನ್ನೂರು ತೆಂಡೇಕೆರೆ ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಕ್ಷಾಬಂಧನ, ಧ್ವಜಾರೋಹಣ, ಮತ್ಸಂಗ್ರಹಣ, ಅಂಕುರಾರೋಪಣ, ಪಂಚಗವ್ಯ ಅಭಿಷೇಕ, ಗಣಪತಿ ಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
23ರಂದು ಬೆಳಿಗ್ಗೆ 6ಕ್ಕೆ ಶಿವಯಾಗ ಮಂಟಪ ಪ್ರತಿಷ್ಠೆ, ನವಗ್ರಹ, ಮೃತ್ಯುಂಜಯ ಏಕಾದಶರುದ್ರ, ದ್ವಾದಶದಿತ್ಯಾ ಸ್ಕಂದ, ಅಷ್ಠಲಕ್ಷ್ಮಿ ಸಮೇತ ಲಕ್ಷ್ಮೀನಾರಾಯಣ ಉಮಾ ಮಹೇಶ್ವರ ಪ್ರಧಾನ, ಬಸವೇಶ್ವರರ ಕಲಶಾರಾಧನೆ, 10.30ರಿಂದ ವಿವಿಧ ಬಗೆಯ ಹೋಮ, ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. 24ರಂದು ಬೆಳಿಗ್ಗೆ 4.30ರ ಬ್ರಾಹ್ಮೀ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ, 6.30ರಿಂದ ರುದ್ರಾಭಿಷೇಕ, ಕಲಾಹೋಮ, ಗ್ರಾಮದೇವತಾ, ಇಷ್ಟದೇವತಾ, ಜಯಾದಿ ಪ್ರಾಯಶ್ಚಿತ್ತ ಹೋಮ, ಶಿಖರ ಕಲಶಾರೋಹಣ, ಪೂರ್ಣಾಹುತಿ, ದೃಷ್ಟಿಪೂಜೆ, ಮಂತ್ರೋಪದೇಶಗಳು ನಡೆಯಲಿವೆ.
ಈ ಧಾರ್ಮಿಕ ಕಾರ್ಯಕ್ರಮಗಳು ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ತೇಜೂರು ಸಿದ್ದರಾಮೇಶ್ವರ ಮಠದ ಕಲ್ಯಾಣ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಲಿವೆ. ಪ್ರೊ.ಕೆ.ಸಿ ಬಸವರಾಜು ಪ್ರಧಾನ ಉಪನ್ಯಾಸ, ಮೈಸೂರಿನ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಯ ಮೊರಬದ ಮಲ್ಲಿಕಾರ್ಜುನ ಹಾಗೂ ನಂದೀಶ್ ಹಂಚೆ ಉಪನ್ಯಾಸ ನೀಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಶಾಸಕರಾದ ಎ. ಮಂಜು, ಎಚ್.ಡಿ. ರೇವಣ್ಣ, ಸಂಸದ ಶ್ರೇಯಶ್ ಪಟೇಲ್, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಭಾಗವಹಿಸಲಿದ್ದಾರೆ. ರಾತ್ರಿ 8.30ಕ್ಕೆ ಕೃಷ್ಣ ಸಂಧಾನ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.