ADVERTISEMENT

ಹಾಸನ: ಕಸದ ರಾಶಿ ಬಳಿ ಬಿಸಾಡಿ ಹೋಗಿರುವ ತಾಯಿ; ಬೀದಿ ನಾಯಿ ಪಾಲಾದ ಅನಾಥ ಶಿಶು

​ಪ್ರಜಾವಾಣಿ ವಾರ್ತೆ
Published 16 ಮೇ 2019, 14:47 IST
Last Updated 16 ಮೇ 2019, 14:47 IST
   

ಹಾಸನ: ನಗರದ ಸಂಪಿಗೆ ರಸ್ತೆಯಲ್ಲಿ ಗುರುವಾರ ಅನಾಥ ಶಿಶುವಿನ ಮೃತದೇಹ ಬೀದಿ ನಾಯಿಗಳಿಗೆ ಆಹಾರವಾಗಿದೆ.

ನವಜಾತ ಕಂದಮ್ಮನನ್ನು ತಾಯಿ ಕಸದ ರಾಶಿಗೆ ಎಸೆದು ಹೋಗಿದ್ದು, ಬೀದಿ ನಾಯಿಗಳು ಮಗುವನ್ನು ಎಳೆದು ತಿನ್ನುತ್ತಿರುವ ದೃಶ್ಯವನ್ನು ಸಾರ್ವಜನಿಕರು ವಿಡಿಯೊ ಮಾಡಿದ್ದು, ಅದು ವೈರಲ್ ಆಗಿದೆ.

ಬುಧವಾರ ರಾತ್ರಿಯೇ ಮಗುವನ್ನು ಅಲ್ಲಿ ಎಸೆಯಲಾಗಿದ್ದು, ಕಂದಮ್ಮನ ಅಂಗಾಗಳೆಲ್ಲ ನಾಯಿಗಳಿಗೆ ಆಹಾರವಾಗಿದೆ. ಕೂಡಲೇ ಅಲ್ಲಿನ ಕಸವನ್ನು ಪಕ್ಕಕ್ಕೆ ಸರಿಸಿ ನೋಡಿದಾಗ ಗಂಡು ಮಗು ಮೃತಪಟ್ಟಿರುವುದು ಪತ್ತೆಯಾಗಿದೆ.

ತಲೆ ಹಾಗೂ ಕಾಲುಗಳು ಮಾತ್ರ ಉಳಿದಿದ್ದು, ಸಾರ್ವಜನಿಕರೇ ಅಂತ್ಯ ಸಂಸ್ಕಾರ ನೆರವೇರಿಸಿದರು. ಮಗುವಿನ ದಾರುಣ ಸ್ಥಿತಿ ಕಂಡು ಸಾರ್ವಜನಿಕರು ಮರುಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.