ADVERTISEMENT

ಚನ್ನರಾಯಪಟ್ಟಣ: ವಳಗೇರಮ್ಮದೇವಿಗೆ ರಥ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 13:04 IST
Last Updated 15 ಜುಲೈ 2024, 13:04 IST
ಚನ್ನರಾಯಪಟ್ಟಣದಲ್ಲಿ ಗ್ರಾಮದೇವತೆ ವಳಗೇರಮ್ಮ ದೇವಿಗೆ ನೂತನ ರಥ ಸಮರ್ಪಿಸಲಾಯಿತು
ಚನ್ನರಾಯಪಟ್ಟಣದಲ್ಲಿ ಗ್ರಾಮದೇವತೆ ವಳಗೇರಮ್ಮ ದೇವಿಗೆ ನೂತನ ರಥ ಸಮರ್ಪಿಸಲಾಯಿತು   

ಚನ್ನರಾಯಪಟ್ಟಣ: ಇಲ್ಲಿನ ಐತಿಹಾಸಿಕ ವಳಗೇರಮ್ಮ ದೇವಿಗೆ ರಥ ಸಮರ್ಪಣೆ ಕಾರ್ಯ ಶ್ರದ್ಧಾ ಭಕ್ತಿಯಿಂದ  ಇತ್ತೀಚೆಗೆ ನೆರವೇರಿತು.

ಭಕ್ತರ ನೆರವಿನಿಂದ ಅಂದಾಜು ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 17 ಅಡಿ ಎತ್ತರದ ನೂತನ ತೇರಿಗೆ ಪೂಜೆ ಸಲ್ಲಿಸಿದ ಬಳಿಕ ಅಭಿಜಿನ್ ಮುಹೂರ್ತದಲ್ಲಿ ರಥಕ್ಕೆ ಚಾಲನೆ ನೀಡಲಾಯಿತು.

ಅಲಂಕೃತ ರಥದಲ್ಲಿ ದೇವಿ ಪ್ರತಿಷ್ಠಾಪಿಸಿ ಘೋಷಣೆ ಮೊಳಗಿಸುತ್ತಾ ಭಕ್ತರು ತೇರನ್ನು ಎಳೆದರು. ಮಂಗಳವಾದ್ಯದ ನಾದದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಹಾಕುವ ಮೂಲಕ ಸಮರ್ಪಿಸಲಾಯಿತು.

ADVERTISEMENT

ದೇಗುಲವನ್ನು ತಳಿರು, ತೋರಣದಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡಲಾಯಿತು. ಕ್ರೋಧಿ ನಾಮ ಸಂವತ್ಸರದ ಅಷಾಢಮಾಸ, ಶುಕ್ಲಪಕ್ಷ ಅಷ್ಟಮಿಯಂದು ಕಳಸ ಸ್ಥಾಪನೆ, ಗಣಪತಿ ನವಗ್ರಹ, ಮೃತ್ಯುಂಜಯ ವಾಸ್ತು ಪೂಜೆ, ನವಚಂಡಿಕಾ ಹೋಮ, ಪೂರ್ಣಾಹುತಿ ನೆರವೇರಿಸಲಾಯಿತು.

ಸಾವಿರಾರು ಭಕ್ತರು ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.