ADVERTISEMENT

ಶ್ರೀಲಂಕಾ ಮಾದರಿ ಆನೆ ಕಾರಿಡಾರ್‌ಗೆ ಚಿಂತನೆ: ಸಚಿವ ಕೆ.ಎನ್. ರಾಜಣ್ಣ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಕೆ.ಎನ್‌.ರಾಜಣ್ಣ
ಕೆ.ಎನ್‌.ರಾಜಣ್ಣ   

ಹಾಸನ: ‘ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶ್ರೀಲಂಕಾ ಮಾದರಿ ಆನೆ ಕಾರಿಡಾರ್ ನಿರ್ಮಾಣದ ಚರ್ಚೆ ಮುನ್ನೆಲೆಗೆ ಬಂದಿದ್ದು, ಸಾಧಕ– ಬಾಧಕಗಳನ್ನು ಪರಾಮರ್ಶಿಸಿ ಅನುಷ್ಠಾನಕ್ಕೆ ತರುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯ ಮಲೆನಾಡು ಭಾಗವಾದ ಸಕಲೇಶಪುರ, ಆಲೂರು, ಬೇಲೂರು, ನೆರೆಯ ಚಿಕ್ಕಮಗಳೂರು, ಮೂಡಿಗೆರೆಯಲ್ಲಿಯೂ ಕಾಡಾನೆ ಸಮಸ್ಯೆ ಇರುವುದರಿಂದ ಹಾವಳಿ ನಿಯಂತ್ರಣಕ್ಕೆ ಚರ್ಚೆಗಳು ನಡೆಯುತ್ತಿವೆ’ ಎಂದರು.

‘ಶ್ರೀಲಂಕಾ ಮಾದರಿ ಆನೆ ಧಾಮ ನಿರ್ಮಿಸಿದರೆ, ಕಾಡಾನೆ ಹಾವಳಿ ತಡೆಯಬಹುದೆಂಬ ಮಾತು ಕೇಳಿ ಬಂದಿದೆ. ಅರ್ಜುನನ ಸಾವಿನ ನಂತರ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಪ್ರಮುಖವಾಗಿ ಪ್ರಸ್ತಾಪವಾಗಿದೆ’ ಎಂದರು.

ADVERTISEMENT

‘ಆನೆ ಹಾವಳಿ ಇರುವ ಜಿಲ್ಲೆಗಳಲ್ಲಿ ನಿರ್ದಿಷ್ಟ ಪ್ರದೇಶವನ್ನು ಗುರುತಿಸಿ ಧಾಮ ನಿರ್ಮಿಸಿದರೆ ಹೆಚ್ಚು ಅನುಕೂಲವಾಗಲಿದೆ. ಈ ಕುರಿತು ಸಲಹೆ, ಸೂಚನೆ ಪಡೆಯಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.