ADVERTISEMENT

ಶ್ರವಣಬೆಳಗೊಳ | ಬೆಳೆ ಸಾಲ ಕೃಷಿಗೇ ಬಳಸಿ: ಸಿ.ಎನ್.ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:57 IST
Last Updated 6 ಫೆಬ್ರುವರಿ 2026, 5:57 IST
ಶ್ರವಣಬೆಳಗೊಳ ಹೋಬಳಿ ವಡ್ಡರಹಳ್ಳಿ ಕೃಷಿ ಪತ್ತಿನ ಸಹಾಕಾರ ಸಂಘವು ಒದಗಿಸಿದ ಹೊಸ ಸಾಲದ ಫಲಾನುಭವಿಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಎಟಿಎಂ ಕಾರ್ಡುಗಳನ್ನು ವಿತರಿಸಿ ಮಾತನಾಡಿ ಸಂದರ್ಭದಲ್ಲಿ ಸಿ.ಎನ್.ಪುಟ್ಟಸ್ವಾಮಿಗೌಡ, ದಿನೇಶ್, ನಾಗೇಶ್, ಪಾಲ್ಗೊಂಡಿದ್ದರು.
ಶ್ರವಣಬೆಳಗೊಳ ಹೋಬಳಿ ವಡ್ಡರಹಳ್ಳಿ ಕೃಷಿ ಪತ್ತಿನ ಸಹಾಕಾರ ಸಂಘವು ಒದಗಿಸಿದ ಹೊಸ ಸಾಲದ ಫಲಾನುಭವಿಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಎಟಿಎಂ ಕಾರ್ಡುಗಳನ್ನು ವಿತರಿಸಿ ಮಾತನಾಡಿ ಸಂದರ್ಭದಲ್ಲಿ ಸಿ.ಎನ್.ಪುಟ್ಟಸ್ವಾಮಿಗೌಡ, ದಿನೇಶ್, ನಾಗೇಶ್, ಪಾಲ್ಗೊಂಡಿದ್ದರು.   

ಶ್ರವಣಬೆಳಗೊಳ: ಕೃಷಿ ಪತ್ತಿನ ಸಹಕಾರ ಸಂಘ ನೀಡುವ ಹೊಸ ಸಾಲವನ್ನು ನೂತನ ಷೇರುದಾರರು ಬೆಳೆ  ಉದ್ದೇಶಕ್ಕೆ ಮಾತ್ರ ಉಪಯೋಗಿಸಿಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಹೋಬಳಿಯ ವಡ್ಡರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಷೇರುದಾರರಿಗೆ ನೂತನ ಸಾಲದ ಎಟಿಎಂ ಕಾರ್ಡುಗಳನ್ನು ವಿತರಿಸಿ ಅವರು ಮಾತನಾಡಿದರು.  ಸಂಘದ ನಿರ್ದೇಶಕರು ಬೆಳೆ ಸಾಲ ನೀಡಿ ರೈತರಿಗೆ ಆರ್ಥಿಕವಾಗಿ ನೆರವಾಗುತ್ತಿರುವುದು  ಶ್ಲಾಘನೀಯ ಎಂದರು.  ಸಂಘದಡಿ ₹6.87 ಕೋಟಿ  ಕೆಸಿಸಿ ಸಾಲ , ಸ್ತ್ರೀ ಶಕ್ತಿ ಸಂಘಗಳಿಗೆ ₹ 38 ಲಕ್ಷ ಸಾಲ ನೀಡಲಾಗಿದೆ. ₹1.10 ಎಂಪಿ ಎಸ್ ಇದೆ ಎಂದರು.  

 ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿ ಗೌಡ, ಅಧ್ಯಕ್ಷ ವಿ.ಎಂ.ದಿನೇಶ್, ಉಪಾಧ್ಯಕ್ಷ ಕೆ.ಹೊಸಹಳ್ಳಿ ನಾಗೇಶ್, ಜಿಲ್ಲಾ ಸಹಕಾರಿ ನಿರ್ದೇಶಕ  ವಿ.ಎನ್.ರಾಜಣ್ಣ, ನಿರ್ದೇಶಕರಾದ ಆರ್.ಮಂಜಪ್ಪ, ಸಿ.ಬಿ.ಹರೀಶ್, ಚಂದ್ರಮ್ಮ ಶಿವರಾಂ, ಮಮತಾ ರಾಜೇಶ್, ಕಾಳಮ್ಮ ಜಯರಾಂ, ಮುಖಂಡರಾದ ಗಣೇಶ್ ಗೌಡ, ಪ್ರವೀಣ್, ಮಂಜಣ್ಣ, ಚಿಕ್ಕಬಿಳ್ತಿ ಗಂಗಾಧರ್, ಜಿ.ವಾಸು, ಎ.ಸಿ.ಶಿವರಾಂ,  ಪಂಚಾಯಿತಿ ಸದಸ್ಯರಾದ ಪ್ರಮೀಳಾ ನಾಗರಾಜ್, ಮಂಜುನಾಥ್ ಪಾಲ್ಗೊಂಡಿದ್ದರು.

ADVERTISEMENT
ಭಾಗವಹಿಸಿದ್ದ ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.