ADVERTISEMENT

ಬೇಲೂರು | ಸಾಲುಮರದ ತಿಮ್ಮಕ್ಕನ ಕ್ಷಮೆ ಕೇಳಲಿದೆ ಜಿಲ್ಲಾಡಳಿತ: DC ಲತಾಕುಕುಮಾರಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 2:09 IST
Last Updated 31 ಆಗಸ್ಟ್ 2025, 2:09 IST
ಬೇಲೂರಿನ ತಾಲ್ಲೂಕು ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಲತಾಕುಕುಮಾರಿ ಶನಿವಾರ ಗಿಡ ನೆಟ್ಟರು. ತಹಶೀಲ್ದಾರ್ ಶ್ರೀಧರ್ ಕಂಕನವಾಡಿ, ಉಪತಹಶೀಲ್ದಾರ್ ಪ್ರದೀಪ್, ಶಿರಸ್ತೆದಾರ್‌ ತನ್ವಿರ್ ಇದ್ದಾರೆ
ಬೇಲೂರಿನ ತಾಲ್ಲೂಕು ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಲತಾಕುಕುಮಾರಿ ಶನಿವಾರ ಗಿಡ ನೆಟ್ಟರು. ತಹಶೀಲ್ದಾರ್ ಶ್ರೀಧರ್ ಕಂಕನವಾಡಿ, ಉಪತಹಶೀಲ್ದಾರ್ ಪ್ರದೀಪ್, ಶಿರಸ್ತೆದಾರ್‌ ತನ್ವಿರ್ ಇದ್ದಾರೆ   

ಬೇಲೂರು: ‘ಸಾಲುಮರದ ತಿಮ್ಮಕ್ಕನವರ ಮನಸ್ಸಿಗೆ ನೋವಾಗಿದ್ದಾರೆ ಜಿಲ್ಲಾಡಳಿತ ಕ್ಷಮೆಯಾಚಿಸುತ್ತದೆ’ ಎಂದು ಜಿಲ್ಲಾಧಿಕಾರಿ ಲತಾಕುಕುಮಾರಿ ತಿಳಿಸಿದರು.

ತಾಲ್ಲೂಕು ಕಚೇರಿ ಆವರಣದಲ್ಲಿ ಶನಿವಾರ ಗಿಡನೆಟ್ಟು ಮಾತನಾಡಿದ ಅವರು, ‘ನಾನು ಮೊದಲ ಬಾರಿ ಈ ತಾಲ್ಲೂಕು ಕಚೇರಿಗೆ ಬಂದಾಗ ಈ ಜಾಗದಲ್ಲಿ ತುಂಬಾ ಪಾರ್ಥೇನಿಯಂ ಗಿಡಗಳು ಬೆಳೆದಿದ್ದವು. ಹಾವುಗಳು ಇದ್ದವು. ಅದನ್ನು ನೋಡಿ, ಜಾಗವನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ಮಾಡಲು ನಾನು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ತಿಳಿಸಿದ್ದೆ. ಆ ನಿಟ್ಟಿನಲ್ಲಿ ಅವರು ಸ್ವಚ್ಛ ಮಾಡಿಸಿದ್ದಾರೆ. ಜನರಿಗೆ ವಾಕಿಂಗ್ ಮಾಡಲು, ಕಚೇರಿಗೆ ಬರುವವರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ’ ಎಂದು ಸ್ಪಷ್ಟನೆ ನೀಡಿದರು. 

‘ಸಾಲುಮರದ ತಿಮ್ಮಕ್ಕನವರು ಗಿಡ ನೆಟ್ಟಿರುವುದು ನಿಜ, ಗಿಡ ಕೀಳಲಾಗಿದೆ ಎಂಬ ವಿಷಯದಲ್ಲಿ ತಿಮ್ಮಕ್ಕನವರಿಗೆ ಹಾಗೂ ಅವರ ಸಾಕುಮಗ ಉಮೇಶ್ ಅವರಿಗೆ ನೋವಾಗಿದ್ದು, ನಾನು ಅವರ ಮನೆಗೆ ಭೇಟಿ ನೀಡಿ ಬಂದಿದ್ದು, ಅವರ ಮನವೋಲಿಸಲಾಗಿದೆ. ಒಳ್ಳೆಯ ಉದ್ದೇಶಕ್ಕಾಗಿ ಗಿಡಗಳನ್ನು ಕಿತ್ತಿದ್ದರೆ ನಮ್ಮ ಅಭ್ಯಂತರವಿಲ್ಲ. ಆದರೆ, ಅದನ್ನು ನಮಗೆ ತಿಳಿಸಬೇಕಿತ್ತು ಮತ್ತು ಗೌರವ ನೀಡಬೇಕಿತ್ತು ಎಂದು ಹೇಳಿದ್ದಾರೆ. ಅವರ ಗೌರವಕ್ಕೆ ಚ್ಯುತಿತರುವ ಕೆಲಸವನ್ನು ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಮಾಡಿಲ್ಲ, ಮಾಡುವುದು ಇಲ್ಲ. ಅವರು ನಮ್ಮ ದೇಶದ ಆಸ್ತಿ, ಅವರ ಹೆಸರಿನಲ್ಲೆ ಇಂದು ಗಿಡ ನೆಡುತಿದ್ದು, ಅವರ ಹೆಸರಿನಲ್ಲೇ ಸಾವಿರಾರು ಗಿಡ ನೆಡಲಾಗುವುದು’ ಎಂದರು.

ADVERTISEMENT

ತಹಶೀಲ್ದಾರ್ ಶ್ರೀಧರ್ ಕಂಕನವಾಡಿ, ಉಪತಹಶೀಲ್ದಾರ್ ಪ್ರದೀಪ್, ಶಿರಸ್ತೇದಾರ್‌ ತನ್ವಿರ್, ರಾಜಸ್ವನಿರೀಕ್ಷಕ ನಟರಾಜು, ಗ್ರಾಮಲೆಕ್ಕಿಗ ಹನುಮಂತು, ವಲಯ ಅರಣ್ಯಾಧಿಕಾರಿಗಳಾದ ಬಿ.ಜಿ.ಯತೀಶ್, ಶೈಲಾ, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಕೆಡಿಪಿ ಸದಸ್ಯ ಚೇತನ್ ಸೇರಿದಂತೆ ದಿವ್ಯ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.