ADVERTISEMENT

ಹಬ್ಬನಘಟ್ಟ: ವಸಂತಕುಮಾರಿ ದಿನೇಶ್ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 13:26 IST
Last Updated 17 ಏಪ್ರಿಲ್ 2025, 13:26 IST
ಅರಸೀಕೆರೆ ತಾಲ್ಲೂಕಿನ ಹಬ್ಬನಘಟ್ಟ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ವಸಂತಕುಮಾರಿ ದಿನೇಶ್ ಅವಿರೋಧವಾಗಿ ಆಯ್ಕೆಯಾದರು
ಅರಸೀಕೆರೆ ತಾಲ್ಲೂಕಿನ ಹಬ್ಬನಘಟ್ಟ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ವಸಂತಕುಮಾರಿ ದಿನೇಶ್ ಅವಿರೋಧವಾಗಿ ಆಯ್ಕೆಯಾದರು   

ಅರಸೀಕೆರೆ: ತಾಲ್ಲೂಕಿನ ಹಬ್ಬನಘಟ್ಟ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ವಸಂತಕುಮಾರಿ ದಿನೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಂಚಾಯಿತಿ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಸಂತೋಷ್ ಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 16 ಸದಸ್ಯರುಗಳ ಬಲವಿದ್ದು, ನಿಕಟಪೂರ್ವ ಅಧ್ಯಕ್ಷರಾದ ಚಂದ್ರಶೇಖರ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ವಸಂತಕುಮಾರಿ ದಿನೇಶ್ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ.

ADVERTISEMENT

ನೂತನ ಅಧ್ಯಕ್ಷೆ ವಸಂತಕುಮಾರಿ ದಿನೇಶ್ ಮಾತನಾಡಿ, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸುವುದರ ಜತೆಗೆ ಅಭಿವೃದ್ಧಿ ಕೆಲಸಗಳು ಹಾಗೂ ನರೇಗಾ ಕಾಮಗಾರಿ ಮತ್ತು ಉದ್ಯೋಗ ಖಾತರಿ ಯೋಜನೆಯಡಿ ಸಮರ್ಪಕ ಉದ್ಯೋಗ ಕಾರ್ಡ್ ವಿತರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪ್ರತಿಯೊಬ್ಬ ಸದಸ್ಯರುಗಳ ಸಹಕಾರ ಅತ್ಯಗತ್ಯ ಎಂದರು.

ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಸರೋಜಮ್ಮ ನಾಗರಾಜ್, ಸದಸ್ಯರಾದ ರಾಜೇಶ್, ಶಿವಕುಮಾರ್, ಸುರೇಶ್, ಅರುಣ್ ಕುಮಾರ್, ಬಸಪ್ಪ, ಸಿದ್ದನಂಜಪ್ಪ, ರಾಜಕುಮಾರ್, ಗೌರಮ್ಮ ಬಸವನಾಯಕ, ಭಾರತಿ ವಿರೂಪಾಕ್ಷ, ನೇತ್ರಾವತಿ ಧರ್ಮನಾಯಕ, ಕೋಮಲಾ ಶಿವರಾಜ್, ರೇಣುಕಾ ಹನುಮೇಗೌಡ, ಸವಿತಾ ಬಸವರಾಜ್, ಮುಖಂಡರಾದ ಶಿವಮೂರ್ತಿ ಗುತ್ತಿನಕೆರೆ, ರುದ್ರಮುನಿ, ಸೆಸ್ಕ್ ಗ್ರಾಹಕರ ಸಲಹಾ ಸಮಿತಿ ನಾಮನಿರ್ದೇಶಿತ ಸದಸ್ಯ ಮಲ್ಲಿದೇವಿಹಳ್ಳಿ ಮಂಜುನಾಥ್, ಜಯಕುಮಾರ್, ರಾಮಯ್ಯ, ಮಂಜಪ್ಪ, ಯೋಗೀಶ್, ಬಸವರಾಜು, ಲೋಕೇಶ್ ಮಂದಾವಳ್ಳಿ, ಪಿಡಿಒ ಪ್ರವೀಣ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.