ADVERTISEMENT

ಹಳೇಬೀಡು: ಹಾಳಾದ ರಸ್ತೆ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:30 IST
Last Updated 25 ಜುಲೈ 2025, 2:30 IST
<div class="paragraphs"><p>ಹಳೇಬೀಡಿನ ಬಿಎಸ್ಎನ್ಎಲ್ ಕಚೇರಿ ತಿರುವಿನಲ್ಲಿ ಕೆಸರಿನ ರಾಡಿ ಹರಡಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ.</p></div>

ಹಳೇಬೀಡಿನ ಬಿಎಸ್ಎನ್ಎಲ್ ಕಚೇರಿ ತಿರುವಿನಲ್ಲಿ ಕೆಸರಿನ ರಾಡಿ ಹರಡಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ.

   

ಹಳೇಬೀಡು: ಇಲ್ಲಿಯ ಬಿಎಸ್ಎನ್ಎಲ್ ಕಚೇರಿಯ ತಿರುವಿನ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ರಸ್ತೆ ಕೆಸರು ಗದ್ದೆಯಂತಾಗಿದೆ.

ರಸ್ತೆ ಹದಗೆಟ್ಟ ಕಾರಣ ವಾಹನ ಸವಾರರು, ಪಾದಚಾರಿಗಳು ಓಡಾಡಲು ತೊಂದರೆ ಎದುರಿಸುವಂತಾಗಿದೆ. ರಸ್ತೆ ಗುಂಡಿಯಲ್ಲಿ ಹಲವು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ADVERTISEMENT

ದೊಡ್ಡ ವಾಹನಗಳು ಸಂಚರಿಸುವಾಗ ಕೊಳಚೆ ಮೈ ಮೇಲೆ ಚಿಮ್ಮುತ್ತದೆ. ರಸ್ತೆ ಪಕ್ಕದ ಮನೆಗಳು ಕೆಸರಿನ ರಾಡಿಯಾಗಿವೆ ಎಂದು ಸ್ಥಳೀಯರು ದೂರಿದ್ದಾರೆ.

ಹೊಯ್ಸಳ ಬಡಾವಣೆ, ಜನತಾ ಕಾಲೊನಿ ಹಾಗೂ ಪೊಲೀಸ್ ಠಾಣೆ ಹಿಂಭಾಗದ ರಸ್ತೆಯ ಹಲವು ಭಾಗದ ನಿವಾಸಿಗಳು ಬಸ್ ನಿಲ್ದಾಣ, ಆಸ್ಪತ್ರೆ, ಶಾಲಾ, ಕಾಲೇಜಿಗೆ

ಹೋಗಲು ಇದೇ ಮಾರ್ಗ ಅನುಸರಿಸಬೇಕು. ಶಾಲೆ–ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಕೆಸರಿನಲ್ಲಿ ಬೀಳುವುದು ಸಾಮಾನ್ಯವಾಗಿದೆ.

ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಕೆಸರು ಗದ್ದೆಯಾಗಿದೆ. ರಸ್ತೆ ಅಭಿವೃದ್ಧಿ ಪಡಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಕುಮಾರ್ ಮನವಿ ಮಾಡಿದ್ದಾರೆ.

‘ರಸ್ತೆಗೆ ಮಣ್ಣು ತುಂಬಿಸಿದ್ದೆವು. ನಿರಂತರ ಮಳೆಯಿಂದ ಕೆಸರು ಸಂಗ್ರಹವಾಗಿದೆ. ಮಳೆ ಕಡಿಮೆಯಾದ ನಂತರ ರಸ್ತೆ ದುರಸ್ತಿ ಕೈಗೊಳ್ಳುತ್ತೇವೆ’ ಎಂದು ಪಿಡಿಒ ಎಸ್.ಸಿ. ವಿರೂಪಾಕ್ಷ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.