ಬೇಲೂರು: ತಾಲ್ಲೂಕಿನ ಇರಕರವಳ್ಳಿಯಲ್ಲಿ ಶಿವಕುಮಾರ್ ಅವರ ಕಾಫಿ ಕಣದಲ್ಲಿದ್ದ ಕಾಫಿ ಬೀಜಗಳನ್ನು ತಿಂದಿರುವ ಕಾಡಾನೆ ಭೀಮ, ಚೆಲ್ಲಾಪಿಲ್ಲಿ ಮಾಡಿದೆ.
ಶಿವಕುಮಾರ್ ತಮ್ಮ ಮನೆಯ ಮುಂದಿನ ಕಾಫಿ ಕಣದಲ್ಲಿ ಕಾಫಿ ಬೀಜಗಳನ್ನು ರಾಶಿ ಹಾಕಿ ಪ್ಲಾಸ್ಟಿಕ್ ಟಾರ್ಪಾಲ್ ಮುಚ್ಚಿದ್ದರು. ಸೋಮವಾರ ಮಧ್ಯರಾತ್ರಿ ಮನೆಯ ಆವರಣಕ್ಕೆ ಬಂದ ಭೀಮ ಆನೆ ಟಾರ್ಪಾಲ್ ಎಳೆದು ಕಾಫಿ ಬೀಜಗಳನ್ನು ತಿಂದು, ಚೆಲ್ಲಾಪಿಲ್ಲಿ ಮಾಡಿರುವ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
‘ಅರಣ್ಯ ಇಲಾಖೆಯವರು ಕಾಡಾನೆಗಳನ್ನು ನಿಯಂತ್ರಿಸಲು ಹೆಚ್ಚಿನ ಗಮನಹರಿಸಬೇಕು. ಕಾಡಾನೆಗಳ ಉಪಟಳದಿಂದ ಬೆಳೆದ ಬೆಳೆ ಸಿಗುತ್ತಿಲ್ಲ. ಭೀಮ ಕಾಡಾನೆ ಸುತ್ತಲಿನ ಗ್ರಾಮಗಳಲ್ಲಿ ಸಂಚರಿಸುತ್ತಿದ್ದು, ಅರಣ್ಯ ಇಲಾಖೆ ಓಡಿಸಲು ಕ್ರಮ ಕೈಗೊಳ್ಳುವಂತೆ’ ಶಿವಕುಮಾರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.