ADVERTISEMENT

Hasanamba Temple: ಇಂದಿನಿಂದ ಹಾಸನಾಂಬೆಯ ದರ್ಶನ ಆರಂಭ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 0:26 IST
Last Updated 9 ಅಕ್ಟೋಬರ್ 2025, 0:26 IST
ಹಾಸನದ ಹಾಸನಾಂಬ ದೇಗುಲದ ಗರ್ಭಗುಡಿ (ಸಂಗ್ರಹ ಚಿತ್ರ)
ಹಾಸನದ ಹಾಸನಾಂಬ ದೇಗುಲದ ಗರ್ಭಗುಡಿ (ಸಂಗ್ರಹ ಚಿತ್ರ)   

ಹಾಸನ: ನಗರದ ಹಾಸನಾಂಬ ದೇವಾಲಯದ ಗರ್ಭಗುಡಿಯ ಬಾಗಿಲು ಗುರುವಾರ ತೆರೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಈ ಬಾರಿ ಸುಗಮ ದರ್ಶನಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅ.9 ರಂದು ಬಾಗಿಲು ತೆರೆಯಲಾಗುತ್ತಿದ್ದು, ಅ.23ರಂದು ಬಾಗಿಲು ಮುಚ್ಚಲಾಗುವುದು. ಮೊದಲ ಹಾಗೂ ಕೊನೆಯ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿಲ್ಲ. ಅ.10 ರಿಂದ 22 ರವರೆಗೆ ಜನರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಬಾರಿ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಲಾಗಿದ್ದು, ಗೋಲ್ಡ್‌ ಪಾಸ್‌ ಜಾರಿಗೊಳಿಸಲಾಗಿದೆ. ಒಂದು ಪಾಸ್‌ಗೆ ಒಬ್ಬರು ಮಾತ್ರ ಬೆಳಿಗ್ಗೆ 7 ರಿಂದ 10ರವರೆಗೆ ದರ್ಶನ ಪಡೆಯಬಹುದು. ಗಣ್ಯರಿಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಅವಕಾಶ ನೀಡಲಾಗಿದೆ.

ADVERTISEMENT

ಟಿಕೆಟ್‌ ಕಾದಿರಿಸುವುದು, ಆಯಾ ದಿನ ದರ್ಶನಕ್ಕೆ ತಗುಲುವ ಸಮಯ, ದರ್ಶನದ ವೇಳಾಪಟ್ಟಿ ಸೇರಿ ವಿವಿಧ ಮಾಹಿತಿಯನ್ನು ವಾಟ್ಸ್ ಆ್ಯಪ್‌ನಲ್ಲಿ ಚಾಟ್‌ ಮೂಲಕ ಪಡೆಯಬಹುದಾಗಿದೆ.

ವಿವಿಧ ಚಟುವಟಿಕೆ: ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕೃಷಿ ಮೇಳ, ಶ್ವಾನ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರವಾಸೋದ್ಯಮದ ಅಭಿವೃದ್ಧಿಗೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಲು 12 ಪ್ಯಾಕೇಜ್ ಮಾಡಲಾಗಿದೆ. ಹೆಲಿ ಟೂರಿಸಂಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.