ಬೇಲೂರು: ಕಾಡಾನೆ ಸಮಸ್ಯೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡುತ್ತಿಲ್ಲ, ಇನ್ನು ಹಾಸನ ಸಂಸದರು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ಶೋ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವ್ಯಂಗ್ಯವಾಡಿದರು.
ಕಾಡಾನೆ ದಾಳಿಯಿಂದ ಮೃತ ಪಟ್ಡ ತಾಲ್ಲೂಕಿನ ಕೋಗೋಡು ಬಳಿಯ ಬೊಮ್ಮನಹಳ್ಳಿಯ ಮೃತ ಸುಶೀಲಮ್ಮ ಅವರ ಮನೆಗೆ ಭಾನುವಾರ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಮ್ಮದೇ ಸರ್ಕಾರ ಇದ್ದರೂ ಸಚಿವ ಹಾಗೂ ಸಂಸದರು ಕನಿಷ್ಠ ಒಂದು ದಿನ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಮಾತನಾಡಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 35 ಕೀಮೀ ರೈಲ್ವೆ ಬ್ಯಾರಿಕೆಡ್ ನಿರ್ಮಿಸಿದ್ದು ಬಿಟ್ಟರೇ, ಈ ಸರ್ಕಾರ ಬಂದ ಬಳಿಕ ಕಾಡಾನೆ ಸಮಸ್ಯೆಗೆ ಯಾವ ಪರಿಹಾರವನ್ನೂ ನೀಡಿಲ್ಲ. ಕಳೆದ ಬಜೆಟ್‌ನಲ್ಲಿ ನೆಪಮಾತ್ರಕ್ಕೆ ಹಣ ನೀಡಿದ್ದಾರೆ ಎಂದರು.
ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಾಗ ಮೂರು ತಾಲ್ಲೂಕಿನ ಶಾಸಕರೊಂದಿಗೆ ದೆಹಲಿ ನಿಯೋಗ ಕೊಂಡೊಯ್ಯಲಾಗಿತ್ತು. ಹಾಲಿ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜು, ಜೆಡಿಎಸ್ ಮುಖಂಡ ಅರೇಹಳ್ಳಿ ನಟರಾಜ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ್, ಕೇಶವಮೂರ್ತಿ, ಸಿರಗೂರು ಸೊಸೈಟಿ ಅಧ್ಯಕ್ಷ ಸವಿನ್, ಮಹೇಶ್, ಚಂದು, ಪ್ರಸನ್ನ, ಮಧು, ಅನಿಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.