ADVERTISEMENT

ವಿಧಾನಸಭೆ ಚುನಾವಣೆ | ಸೋಲೋ, ಗೆಲುವೋ ಹೋರಾಟ ಮಾಡುತ್ತೇವೆ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 16:06 IST
Last Updated 18 ಮಾರ್ಚ್ 2022, 16:06 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಹಾಸನ: ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಇದೆ. ಅದರ ಜೊತೆಗೆ ಕರ್ನಾಟಕದ ಚುನಾವಣೆ ನಡೆಯಲಿದೆ ಎನ್ನಲಾಗುತ್ತಿದೆ. ಹೌದಾದರೆ ಎದುರಿಸಲು ಸಿದ್ಧರಿದ್ದೇವೆ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು.

ಹೊಳೆನರಸೀಪುರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಬಿಜೆಪಿ ಬಲ ಹೆಚ್ಚಬಹುದು ಅಥವಾ ಕುಗ್ಗಬಹುದು. ರಾಜ್ಯಗಳ ಚುನಾವಣೆಗೂ, ಸಂಸತ್ ಚುನಾವಣೆಗೂವ್ಯತ್ಯಾಸವಿದೆ ಎಂಬುದು ನನ್ನ ಅನುಭವದ ಮಾತು ಎಂದರು.

ಚುನಾವಣೆ ನಡೆದರೆ ಮನೆಯಲ್ಲಿ ಮಲಗಿಕೊಳ್ಳೋದಕ್ಕೆ ಆಗಲ್ಲ. ಸೋಲೋ, ಗೆಲುವೋ ನಾವೂ ಕೂಡ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ADVERTISEMENT

ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿದ ಗೌಡರು, ಹೈಕೋರ್ಟ್ ತೀರ್ಪಿಗೆಎಲ್ಲರೂ ತಲೆಬಾಗಬೇಕು. ನಮ್ಮ ಪಕ್ಷ ಪರವಾಗಿಯೂ ಇಲ್ಲ,ವಿರೋಧವಾಗಿಯೂ ಇಲ್ಲ. ಇದು ಕಾಂಗ್ರೆಸ್ ಮತ್ತು ಬಿಜೆಪಿ ತಿಕ್ಕಾಟ. ಇದೇ ವಿಚಾರವಾಗಿ ಅನೇಕ ರಾಜಕೀಯ ಪ್ರಸಂಗ ನಡೆಯುತ್ತಿರುವುದನ್ನು ನೋಡಿದ್ದೇನೆ. ಡ್ರೆಸ್‍ಕೋಡ್ ವಿಚಾರವಾಗಿ ಹೈಕೋರ್ಟ್ತೀರ್ಪು ಒಪ್ಪೋದು ಒಂದು ಭಾಗ. ಒಂದು ಸಮುದಾಯದ ಮಕ್ಕಳು ಕಪ್ಪುಬಟ್ಟೆಯನ್ನ ತಲೆ ಮೇಲೆ ಹಾಕಲು ವಿರೋಧವಿದೆ. ಅದರ ಬದಲಾಗಿಶಾಲಾ-ಕಾಲೇಜು ಸಮವಸ್ತ್ರಗಳ ವೇಲ್‌ ಅನ್ನೇ ತಲೆ ಮೇಲೆ ಹಾಕಿಕೊಳ್ಳಬಹುದು. ಆದರೆ, ಕಪ್ಪುಬಟ್ಟೆ ಇಸ್ಲಾಂ ಧರ್ಮದ್ದು ಎಂದು ವಿವಾದವಾಗಿದೆ ಎಂದರು.

ಹಿಜಾಬ್ ಬಗ್ಗೆ ಸರ್ಕಾರ, ಪ್ರತಿಪಕ್ಷ ಮತ್ತು ಪೋಷಕರು ಕುಳಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವುದು ಉತ್ತಮ ಎಂದು ಸಲಹೆ ನೀಡಿದರು.

ಉಕ್ರೇನ್-ರಷ್ಯಾ ಯುದ್ಧ ವಿಚಾರವಾಗಿ ಮಾತನಾಡಿ, ರಷ್ಯಾ, ಚೀನಾ ಜೊತೆಚೆನ್ನಾಗಿದೆ. ಪಾಕಿಸ್ತಾನ ಚೀನಾ ಜೊತೆ ಚೆನ್ನಾಗಿದೆ. ಈ ಯುದ್ಧ ಎಲ್ಲಿಗೆ ಹೋಗಿನಿಲ್ಲುತ್ತೋ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.