
ಹೊಳೆನರಸೀಪುರ: ನಗರನಹಳ್ಳಿ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಮಧ್ಯದಲ್ಲಿ ಇಲ್ಲಿನ ಕೆಂಪೇಗೌಡರು ಕುಟುಂಬ ಸದಸ್ಯರ ಒಪ್ಪಿಗೆಯೊಂದಿಗೆ ಭೂಮಿ ನೀಡಿದ್ದಾರೆ. ಕೊಡುಗೆ ಪ್ರಶಂಸನೀಯ ಎಂದು ಶಾಸಕ ಎ.ಮಂಜು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ನಗರನಹಳ್ಳಿ ಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನಿಡುವಣಿ ಗ್ರಾಮದಲ್ಲಿ ₹65 ಲಕ್ಷ ವೆಚ್ಚದಲ್ಲಿ ಆರೋಗ್ಯ ಉಪ ಕೇಂದ್ರ ಕಟ್ಟಡ ನಿರ್ಮಾಣ ಹಾಗೂ ನಗರನಹಳ್ಳಿ ಗ್ರಾಮದಲ್ಲಿ ₹65 ಲಕ್ಷ ವೆಚ್ಚದಲ್ಲಿ ಆರೋಗ್ಯ ಉಪ ಕೇಂದ್ರ ಕಟ್ಟಡ ನಿರ್ಮಾಣ ಮತ್ತು ದೊಡ್ಡಕಾಡನೂರು ಗ್ರಾಮದಲ್ಲಿ ನೀರಾವರಿ ಇಲಾಖೆಯ ₹12 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ₹1.50 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಪ್ನಾ, ಪಿಡಿಒ ಶ್ರೀನಿವಾಸ, ಸಿಂಚನಾ, ಕಾರ್ಯಪಾಲಕ ಎಂಜಿನಿಯರ್ ಕೇಶವಮೂರ್ತಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್, ಸಹಾಯಕ ಎಂಜಿನಿಯರ್ ರವಿ ಕುಮಾರ್ ಟಿ.ಎನ್., ಜೆಡಿಎಸ್ ಮುಖಂಡರಾದ ಪುಟ್ಟಸೋಮಪ್ಪ, ಶಾಂಬಶಿವಪ್ಪ, ಬಸವರಾಜು, ಲಕ್ಕೇಗೌಡ, ಮೆಣಿಗನಹಳ್ಳಿ ಚಂದ್ರಶೇಖರ್, ಗುತ್ತಿಗೆದಾರ ಲೋಕೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.