ಹಾಸನ: ಜಿಲ್ಲಾ ಡಿಸಿಐಬಿ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ ಆನ್‌ಲೈನ್ ಅಪ್ಲಿಕೇಶನ್ ಬಳಸಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಐವರನ್ನು ಬಂಧಿಸಿದ್ದಾರೆ.
ಸತ್ಯಮಂಗಳ ಬಡಾವಣೆಯ ಎಚ್.ಎಂ. ಟಿ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಿ, ನಗರದ ಆಕಾಶ್, ಕುಮಾರಸ್ವಾಮಿ, ಪೂರ್ಣ ಚಂದ್ರ ತೇಜಸ್ವಿ, ಅವಿನಾಶ್ ಮತ್ತು ನಿರಂಜನ್ ಎಂಬುವರನ್ನು ಬಂಧಿಸಿ, 5 ಮೊಬೈಲ್ ಹಾಗೂ ನೋಟ್ ಪುಸ್ತಕ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.