
ಪ್ರಜಾವಾಣಿ ವಾರ್ತೆ
ಶ್ರವಣಬೆಳಗೊಳ (ಹಾಸನ ಜಿಲ್ಲೆ): ವರ್ಷಾಯೋಗ ಚಾತುರ್ಮಾಸ್ಯ ಆಚರಣೆಗೆ ವರ್ಧಮಾನ ಸಾಗರ ಹಾಗೂ ಸಂಘಸ್ಥ ತ್ಯಾಗಿಗಳೊಂದಿಗೆ ಬಂದಿದ್ದ ಸುಪ್ರಭಾ ಸಾಗರ ಮುನಿ (80) ಜಿನೈಕ್ಯರಾದರು.
ಅವರು ಯಮಸಲ್ಲೇಖನ ವ್ರತಾಚರಣೆ ಮಾಡಿ ಶನಿವಾರ ಸಮಾಧಿ ಮರಣ ಹೊಂದಿದರು.
ಸೆ.4ರಂದು ಅವರು ವರ್ಧಮಾನ ಸಾಗರ ಮುನಿ ಅವರಿಂದ ಯಮಸಲ್ಲೇಖನ ವ್ರತ ಸ್ವೀಕರಿಸಿದ್ದರು. ಅ.17ರ ನಂತರ ಆಹಾರ ಹಾಗೂ ನೀರು ಸೇವನೆ ತ್ಯಜಿಸಿದ್ದರು.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯವರಾದ ಅವರು, ಬಿಎ, ಎಲ್ಎಲ್‌ಬಿ ಪದವಿ ಪಡೆದಿದ್ದರು. ನಿರ್ಣಯ ಸಾಗರ ಮುನಿ ಅವರಿಂದ 2021ರಲ್ಲಿ ಬ್ರಹ್ಮಚರ್ಯ ದೀಕ್ಷೆ ಪಡೆದಿದ್ದರು.
ಅಂತ್ಯಕ್ರಿಯೆ: ಕ್ಷೇತ್ರದ ಚಾರುಕೀರ್ತಿ ಭಟ್ಟಾರಕರ ಮಾರ್ಗದರ್ಶನ ಹಾಗೂ ಆಚಾರ್ಯರ ತ್ಯಾಗಿಗಳ ಸಮ್ಮುಖದಲ್ಲಿ ಭಾನುವಾರ ಅಂತ್ಯಕ್ರಿಯೆ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.